ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಯಶಸ್ವಿಯಾಗಲಿ ಎಂದು ವೃದ್ದಾಶ್ರಮದ ಹಿರಿಯ ನಾಗರಿಕರು ಆಶೀರ್ವಾದಿಸಿದ್ದಾರೆ.
ಡಿಸೆಂಬರ್ 11ರಿಂದ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ದರ್ಶನ್ ಅಭಿಮಾನಿಗಳ ಸಂಘವು ಶುಕ್ರವಾರ ಹೂಟಗಳ್ಳಿಯಲ್ಲಿರುವ ಪಿ.ಜಿ.ಆರ್.ಎಸ್.ಎಸ್. ಆಶ್ರಯ ಕೇಂದ್ರ ಮತ್ತು ವೃದ್ಧರ ಬೃಂದಾವನನಲ್ಲಿ ಹೊದಿಕೆ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ನಂತರ ಚಿತ್ರದ ಯಶಸ್ಸಿಗೆ ಆಶೀರ್ವಾದ ಪಡೆದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್, ಕಡಕೋಳ ಜಗದೀಶ್, ಬೈರತಿ ಲಿಂಗರಾಜು, ರಕ್ತದಾನಿ ಮಂಜು, ಸಹನಗೌಡ, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್, ರವಿಚಂದ್ರ, ರಾಕೇಶ್ ಸೇರಿದಂತೆ ಅನೇಕರು ಹಾಜರಿದ್ದರು.

