ನಂಜನಗೂಡು: ತಾಲ್ಲೂಕಿನ ಹುಸ್ಕೂರು ಗ್ರಾಮದ 21 ವರ್ಷದ ಹೆಚ್.ಎಂ. ಸೃಜನ್ ಭಾರತೀಯ ಸಶಸ್ತ್ರ ಪಡೆಗಳ ಅಗ್ನಿಪಥ್ ಯೋಜನೆ ಅಡಿ ಅಗ್ನಿವೀರ್ ಆಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ಮಹೇಶ್ ಮತ್ತು ಶಿಲ್ಪಾ ದಂಪತಿಗಳ ಪುತ್ರ ಹೆಚ್.ಎಂ ಸೃಜನ್ ರವರ ಕಠಿಣ ಪರಿಶ್ರಮ, ಶಿಸ್ತು ಹಾಗೂ ದೇಶ ಸೇವೆಯ ಛಲದಿಂದ ಬಾಲ್ಯದಿಂದಲೇ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದ ಇವರು, ಅಗ್ನಿವೀರ್ ಗೆ ಆಯ್ಕೆ ಆಗುವ ಮೂಲಕ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಸೃಜನ್ ಕೆಲವೇ ದಿನಗಳಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡು ತರಬೇತಿ ಆರಂಭಿಸಲಿದ್ದಾರೆ. ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಸಂಬಂಧಿಕರು , ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.

