ಮೈಸೂರು : ನಟ ದರ್ಶನ್ ಫಾರಂ ಹೌಸ್ ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಕೇಸ್ ಗೆ ತಿ.‌ನರಸೀಪುರ ನ್ಯಾಯಾಲಯದಿಂದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಯಾಗಿದೆ.

ʼಬಾರ್‌ ಹೆಡೆಡ್‌ ಗೂಸ್‌ʼ ಎಂಬ 4 ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ದರ್ಶನ್ ಸಾಕಿದ್ದರು. ಕೆಂಪಯ್ಯನ ಹುಂಡಿಯ ನಟ ದರ್ಶನ್ ತೋಟದ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದರು.

ಬಾರ್‌ ಹೆಡೆಡ್‌ ಗೂಸ್‌ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ವಲಸೆ ಬಂದಿದ್ದವು. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವಾಗಿದೆ. ಬಾತುಕೊಳಿಗಳನ್ನ ಸ್ನೇಹಿತರು ನೀಡಿದ್ದರು ಎಂದು ಸ್ಪಷ್ಟನೇ ನೀಡಿದ್ದರು. ನಟ ದರ್ಶನ್ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿತ್ತು. ಇದೀಗ ವಿಚಾರಣೆಗೆ ನ್ಯಾಯಾಲಯ ಸಮನ್ಸ್ ನೀಡಿದೆ.