ತಿ. ನರಸೀಪುರ: ಸಿಎಸ್ಆರ್ ಯೋಜನೆಯಡಿ 45 ಲಕ್ಷಗಳ ರೂಗಳ ವೆಚ್ಚದ ಶಾಲೆ ಕೊಠಡಿ ವರುಣ ಕ್ಷೇತ್ರದ ಪುಟ್ಟೇಗೌಡನ ಹುಂಡಿ ಚಟ್ನಳ್ಳಿ ಗ್ರಾಮದಲ್ಲಿ ಉದ್ಘಾಟನೆಗೊಂಡಿತು.

ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ನಂಜುಂಡಸ್ವಾಮಿ ಜೊತೆಗೂಡಿ ನೂತನ ಶಾಲಾ ಕೊಠಡಿಯನ್ನು ಲೋಕಾರ್ಪಣೆ  ಮಾಡಿದರು.

ನಂತರ ಮಾತನಾಡಿದ ಅವರು ವರ್ಣ ಕ್ಷೇತ್ರದ ಜನತೆ ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದೀರಿ. ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮ ಋಣ ನನ್ನ ಮೇಲಿದೆ ಕ್ಷೇತ್ರದ ಅಭಿವೃದ್ಧಿ ಪಡಿಸುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ. ರಾಜ್ಯದಲ್ಲಿ  ಹೆಚ್ಚು ಅಭಿವೃದ್ಧಿ ಹೊಂದಿರುವ ಕ್ಷೇತ್ರ ಎಂದರೆ ವರುಣ ಕ್ಷೇತ್ರ ಎಂದರು.