ಮೈಸೂರು : ಎಸ್.ಎಲ್ ಭೈರಪ್ಪ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಒಬ್ಬ ಮಹಾನ್ ಸಾಹಿತಿಯನ್ನ ಕಳೆದುಕೊಂಡಿದ್ದೇವೆ‌ ಎಂದು ಎಸ್ ಎಲ್ ಭೈರಪ್ಪ ಅಂತಿಮ ದರ್ಶನ ಪಡೆದ ಬಳಿಕ ಎಂಎಲ್ಸಿ ಎಚ್ ವಿಶ್ವನಾಥ್ ಹೇಳಿಕೆ ನೀಡಿದರು.

ಕನ್ನಡನಾಡಿನ ಸಾಹಿತ್ಯ ಲೋಕದ ದಿಗ್ಗಜರು ಭೈರಪ್ಪನವರು. ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ. ಭೈರಪ್ಪನವರಿಗೆ ರಾಜ್ಯೋತ್ಸವ, ಜ್ಞಾನಪೀಠ, ರಾಜೋತ್ಸವ ಸಿಗಬೇಕಿತ್ತು. ಆದ್ರೆ ಸಿಗಲಿಲ್ಲ. ಇದು ರಾಜಕಾರಣವೋ, ಸರ್ಕಾರದ ಉತ್ಪ್ರೇಕ್ಷೆಯೋ ಗೊತ್ತಿಲ್ಲ ಎಂದರು.

ಸಾಹಿತ್ಯ ಲೋಕಕ್ಕೆ ರಾಜಕಾರಣಿಗಳು ಮಾಡಿದ ಅಪಮಾನ ಇದು ಅನ್ನಿಸುತ್ತದೆ. ನಾನು ಅವರ ಕೆಲ ವಿಚಾರಗಳ ಬಗ್ಗೆ ಟೀಕೆ ಮಾಡಿದ್ದೆ.  ಕೆಲವು ಬಾರೀ ಅವರ ಮನೆಗೆ ಹೋಗಿ ಚರ್ಚೆಯನ್ನು ಮಾಡುತ್ತಿದ್ದೆ. ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾಹಿತ್ಯ ಎಲ್ಲಾ ಕಾಲಕ್ಕೂ ಇರುವಂತದ್ದು ಎಂದರು.