ಮೈಸೂರು : ರೌಡಿ ಶೀಟರ್ ಗಳ ಪೆರೆಡ್ ಮೈಸೂರು ಜಿಲ್ಲೆಯ ಹುಣಸೂರು ಡಿ ವೈ ಎಸ್ ಪಿ ಕಚೇರಿಯಲ್ಲಿ ನಡೆಯಿತು. ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಗಡೀಪಾರು ಎಚ್ಚರಿಕೆ ನೀಡಲಾಯಿತು. ಮೈಸೂರು ಜಿಲ್ಲಾ ಅಡಿಷನಲ್ ಎಸ್ ಪಿ ಮಲ್ಲಿಕ್ ಖಡಕ್ ವಾರ್ನಿಂಗ್ ನೀಡಿದರು.

ಸುಮಾರು 150 ಕ್ಕೂ ಹೆಚ್ಚು ರೌಡಿಗಳು ಭಾಗಿಯಾಗಿದ್ದರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿ ಲಿಸ್ಟ್ ನಲ್ಲಿರುವವರಿಗೆ ಎಚ್ಚರಿಕೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು. ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.

ಸಮಾಜದಲ್ಲಿ ಶಾಂತಿ ಕದಡುವ ಹಾಗೂ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಗಡೀಪಾರಿನ ಎಚ್ಚರಿಕೆ ನೀಡಿ, ನಿಮ್ಮ ವರ್ತನೆಯಿಂದ ಕುಟುಂಬಸ್ಥರ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಚಟುವಟಿಕೆಗಳಿಂದ ದೂರವಿರಿ. ವಯಸ್ಸಾದ ಹಾಗೂ ಉತ್ತಮ ನಡುವಳಿಕೆ ತೋರಿದವರಿಗೆ ರೌಡಿ ಶೀಟರ್ ಗಳಿಂದ ಮುಕ್ತಿ ನೀಡುವ ಬಗ್ಗೆ ಎಎಸ್‌ಪಿ ಭರವಸೆ ನೀಡಿದರು.