ಮೈಸೂರು : ಜಟಿಜಟಿ ಮಳೆ ಮನೆ ಮೇಲ್ಛಾವಣಿ ಕುಸಿದಿದ್ದು, ಕುಟುಂಬಸ್ಥರು ಅಪಾಯದಿಂದ ಪಾರಾಗಿರುವ ಘಟನೆ ಮೈಸೂರಿನ ನಡೆದಿದೆ. ರಾತ್ರಿಯಿಡೀ ಸುರಿದ ಮಳೆಗೆ ಮನೆ ಗೋಡೆ, ಮೇಲ್ಛಾವಣಿ ಕುಸಿದಿದೆ. ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರಗಮ್ಮ ಎಂಬುವರಿಗೆ ಸೇರಿದ ಮನೆಯಾಗಿದೆ. ಮಲಗಿದ್ದ ವೇಳೆ ಮಧ್ಯರಾತ್ರಿಯಲ್ಲಿ ಗೋಡೆ ಕುಸಿತಗೊಂಡಿದೆ. ಗೋಡೆ ಕುಸಿತದಿಂದ ಕುಟುಂಬಸ್ಥರು ಹೊರಬಂದಿದ್ದಾರೆ. ಮನೆಯವರು ಹೊರ ಬರುತ್ತಿದ್ದಂತೆ ಮೇಲ್ಛಾವಣಿ ಕುಸಿದಿದೆ. ಪರಿಹಾರ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.