ಮೈಸೂರು : ಜೋರು ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ಹುಣಸೂರಿನ ನಂದಿನಿ ಲೇಔಟ್ನಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದೆ ನೀರು ಮನೆಗಳಿಗೆ ನುಗ್ಗಿದೆ. ಸ್ಥಳಕ್ಕೆ ಶಾಸಕ ಜಿ.ಡಿ ಹರೀಶ್ಗೌಡ ಭೇಟಿ ನೀಡಿದರು.
ಒಳ ಚರಂಡಿ, ಮಳೆ ನೀರು ಹರಿವ ರಸ್ತೆ ಸರಿಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆ ಸಂದರ್ಭಗಳಲ್ಲಿ ತಮಗಾಗುವ ಸಮಸ್ಯೆ ಸರಿಪಡಿಸುವಂತೆ ಶಾಸಕರಿಗೆ ಸ್ಥಳೀಯರು ಮನವಿ ಮಾಡಿದರು.

