ಮೈಸೂರು : ರಸ್ತೆಯಲ್ಲಿ ಹರಡಿದ್ದ ಮಣ್ಣಿನ ವಿಚಾರಕ್ಕೆ ಗಲಾಟೆ ನಡೆದು ಮೂವರಿಗೆ ಗಾಯವಾಗಿ ಆಸ್ಪತ್ರೆ ದಾಖಲಾದ ಘಟನೆ ಹುಣಸೂರಿನ ಹತ್ತಿ ಮರ ಬೀದಿಯಲ್ಲಿ ನಡೆದಿದೆ.
ಸಾಕಮ್ಮ, ರಮೇಶ್ ನಾಯಕ ಹಾಗೂ ಶ್ರೀನಿವಾಸ್ ಎಂಬುವವರಿಗೆ ಗಾಯವಾಗಿದೆ. ವಿದ್ಯಾ ಹಾಗೂ ಅವರ ಪತಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಸಾಕಮ್ಮ ಅವರಿಗೆ ಸೇರಿದ ನಿವೇಶನದಲ್ಲಿ ಮಣ್ಣು ಹಾಕಲಾಗಿತ್ತು. ಮಣ್ಣು ರಸ್ತೆಗೆ ಹರಡಿಕೊಂಡಿತ್ತು. ರಸ್ತೆಗೆ ಹರಡಿದ್ದ ಮಣ್ಣು ಸರಿ ಪಡಿಸುವ ವಿಚಾರಕ್ಕೆ ಗಲಾಟೆ ನಡೆಯಿತು. ಗಲಾಟೆಯಲ್ಲಿ ಮೂವರಿಗೆ ಗಾಯವಾಗಿದ್ದು, ಗಲಾಟೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

