ಮೈಸೂರು : ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನೆಲೆ ಮೈಸೂರು ಸಂಚಾರದಲ್ಲಿ ಬದಲಿ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ. ಮೈಸೂರು ಪೊಲೀಸ್ ಆಯುಕ್ತರಿಂದ ಬದಲಿ ಮಾರ್ಗ ಪ್ರಕಟವಾಗಿದ್ದು, ಸಾರ್ವಜನಿಕರು ಬದಲಿಮಾರ್ಗ ಬಳಸಲು ಸೂಚನೆ ನೀಡಲಾಗಿದೆ.
ವಾಹನ ಸಂಚಾರ ನಿರ್ಬಂಧಿಸಲಾಗುವ ರಸ್ತೆಗಳ ವಿವರ
- ಕೆ.ಆರ್.ಐ ರಸ್ತೆ – ಡಿ.ಸಿ. ಕಚೇರಿ ಆರ್ಚ್ ಜಂಕ್ಷನ್ನಿಂದ ಏಕಲವ್ಯ ವೃತ್ತದವರೆಗೆ.
- ಬೋಗಾದಿ ರಸ್ತೆ – ಮೂಡಾ ಜಂಕ್ಷನ್ನಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ.
- ಹುಣಸೂರು ರಸ್ತೆ – ಪಡುವಾರಹಳ್ಳಿ ಜಂಕ್ಷನ್ನಿಂದ ಮೆಟ್ರೋಪೋಲ್ ವೃತ್ತದವರೆಗೆ.
- ಜೆ.ಎಲ್.ಬಿ ರಸ್ತೆ – ರೈಲ್ವೆ ನಿಲ್ದಾಣ ಜಂಕ್ಷನ್ನಿಂದ ಆರ್.ಟಿ.ಓ ವೃತ್ತದವರೆಗೆ.
- ರಾಮವಿಲಾಸ ರಸ್ತೆ – ಮೂಡಾ ಜಂಕ್ಷನ್ನಿಂದ ಬನುಮಯ್ಯ ಜಂಕ್ಷನ್ವರೆಗೆ.
- ಕೃಷ್ಣವಿಲಾಸ ರಸ್ತೆ – ರೋಟರಿ ಜಂಕ್ಷನ್ನಿಂದ ಜಗನ್ಮೋಹನ ಪ್ಯಾಲೇಸ್ ಜಂಕ್ಷನ್ವರೆಗೆ.
- ದಿವಾನ್ಸ್ ರಸ್ತೆ – ಶೃಂಗಾರ್ ಜಂಕ್ಷನ್ನಿಂದ ಕಾಲೇಜು ರಸ್ತೆ ಜಂಕ್ಷನ್ವರೆಗೆ.
- ಎನ್.ಎಸ್. ರಸ್ತೆ – ಪಿ. ಕಾಳಿಂಗರಾವ್ ವೃತ್ತದಿಂದ ತಾತಯ್ಯ ವೃತ್ತದವರೆಗೆ.
- ಕೆ.ಆರ್.ಎಸ್ ರಸ್ತೆ – ದಾಸಪ್ಪ ವೃತ್ತದಿಂದ ಹಸುಕರು ಪಾರ್ಕ್ ಜಂಕ್ಷನ್ವರೆಗೆ.
- ಪರಮಹಂಸ ರಸ್ತೆ – ಬಿ.ಸಿ. ಅಂಗಯ್ಯ ವೃತ್ತದಿಂದ ಮಾಲ್ಗುಡಿ ಜಂಕ್ಷನ್ವರೆಗೆ.
- ವಾಲ್ಮೀಕಿ ರಸ್ತೆ – ವಾಲ್ಮೀಕಿ ರಸ್ತೆ ಜಂಕ್ಷನ್ನಿಂದ ಕೆ.ಆರ್.ಎಸ್ ರಸ್ತೆಯವರೆಗೆ.
- ವಿವೇಕಾನಂದ ರಸ್ತೆ – ಆಕಾಶವಾಣಿ ವೃತ್ತದಿಂದ ಮಾಲ್ಗುಡಿ ಜಂಕ್ಷನ್ವರೆಗೆ.
ಬದಲಿ ಮಾರ್ಗಗಳು
ಹುಣಸೂರು ರಸ್ತೆ, ವಿಜಯನಗರ, ಹೂಟಗಳ್ಳಿ, ಬೋಗಾದಿ, ಸರಸ್ವತಿಪುರಂ, ಕುವೆಂಪುನಗರ ಭಾಗಗಳಿಂದ ಬಸ್/ರೈಲ್ವೆ ನಿಲ್ದಾಣಕ್ಕೆ ತೆರಳುವವರು:
ದ್ಯುತಿ ಜಂಕ್ಷನ್-ಗೋಕುಲಂ ರಸ್ತೆ-ಶರ್ಮಿಲಾ ಕಾನ್ವೆಂಟ್ ರಸ್ತೆ
-ಹಸುಕರು ಪಾರ್ಕ್ ಜಂಕ್ಷನ್
-ಇ.ಎಸ್.ಐ ಆಸ್ಪತ್ರೆ ಜಂಕ್ಷನ್
-ಸೆಕ್ಷನ್ ರಸ್ತೆ
-ಜಾವಾ ರಸ್ತೆ
-ಹೈವೇ ವೃತ್ತ
-ಆರ್.ಎಂ.ಸಿ ವೃತ್ತ
-ಆಯುರ್ವೇದಿಕ್ ವೃತ್ತ
ಮೂಲಕ ಸಂಚರಿಸಬೇಕು.
ಅಗ್ರಹಾರ, ವಿದ್ಯಾರಣ್ಯಪುರಂ, ಅಶೋಕಪುರಂ, ಜೆ.ಪಿ.ನಗರ ಕಡೆಯಿಂದ ಬಸ್/ರೈಲ್ವೆ ನಿಲ್ದಾಣಕ್ಕೆ ತೆರಳುವವರು:
-ಆರ್.ಟಿ.ಓ ವೃತ್ತ-ಸಿದ್ದಪ್ಪ ಸ್ಕ್ವೇರ್-ಅಗ್ರಹಾರ ವೃತ್ತ-* ಎಂ.ಜಿ ರಸ್ತೆ
-ಎಂ.ಆರ್.ಸಿ ವೃತ್ತ
-ಮೃಗಾಲಯ ರಸ್ತೆ
-ಹಾರ್ಡಿಂಜ್ ವೃತ್ತ- ಬಿ.ಎನ್. ರಸ್ತೆ
ಮೂಲಕ ಸಾಗಬೇಕು.
ಬಸ್/ರೈಲ್ವೆ ನಿಲ್ದಾಣದಿಂದ ಹುಣಸೂರು ರಸ್ತೆ ಕಡೆಗೆ ತೆರಳುವವರು
- ಜೆ.ಕೆ. ಮೈದಾನ ಜಂಕ್ಷನ್-ಹೈವೇ ವೃತ್ತ- ಜಾವಾ ರಸ್ತೆ
-ಬೃಂದಾವನ ಎಕ್ಸ್ಟೆನ್ಷನ್ ರಸ್ತೆ
-ಇ.ಎಸ್.ಐ ಆಸ್ಪತ್ರೆ ಜಂಕ್ಷನ -ಕೆ.ಆರ್.ಎಸ್ ರಸ್ತೆ-ಹಸುಕರುಪಾರ್ಕ್ ಜಂಕ್ಷನ್
-ಗೋಕುಲಂ-ದ್ಯುತಿಮೋಟಾರ್ಸ್ ಜಂಕ್ಷನ್
ಮೂಲಕ ಹುಣಸೂರು ರಸ್ತೆ ತಲುಪಬೇಕು.
ಬಸ್/ರೈಲ್ವೆ ನಿಲ್ದಾಣದಿಂದ ವಿದ್ಯಾರಣ್ಯಪುರಂ, ಅಶೋಕಪುರಂ, ಸರಸ್ವತಿಪುರಂ, ಜೆ.ಪಿ.ನಗರ ಕಡೆಗೆ ತೆರಳುವವರು:
- ಆಯುರ್ವೇದಿಕ್ ವೃತ್ತ -ನೆಹರು ವೃತ್ತ- ಬಸ್ ನಿಲ್ದಾಣ-* ಹಾರ್ಡಿಂಜ್ ವೃತ್ತ- ಮೃಗಾಲಯ ರಸ್ತೆ
-ಎಂ.ಆರ್.ಸಿ ವೃತ್ತ -ಎಂ.ಜಿ ರಸ್ತೆ-ಅಗ್ರಹಾರ ವೃತ್ತ
-ಆರ್.ಟಿ.ಓ ವೃತ್ತ
ಮೂಲಕ ಸಂಚರಿಸಬೇಕು.
ವಿದ್ಯಾರಣ್ಯಪುರಂ, ಅಶೋಕಪುರಂ, ಜೆ.ಪಿ.ನಗರ, ಶ್ರೀರಾಮಪುರ, ಗನ್ ಹೌಸ್ ಕಡೆಯಿಂದ ಹುಣಸೂರು ರಸ್ತೆ ಕಡೆಗೆ ತೆರಳುವ ವಾಹನಗಳು:
- ಅಗ್ರಹಾರ ವೃತ್ತ
- ಸಿದ್ದಪ್ಪ ಸ್ಕ್ವೇರ್
- ಆರ್.ಟಿ.ಓ ವೃತ್ತ
- ಕೋರ್ಟ್ ಜಂಕ್ಷನ್
- ಅಗ್ನಿಶಾಮಕ ಠಾಣೆ ಜಂಕ್ಷನ್
- ಡಾ. ಬಿ.ಆರ್. ಅಂಬೇಡ್ಕರ್ ವೃತ್ತ
- ಬೋಗಾದಿ ರಸ್ತೆ
- ಪಡುವಾರಹಳ್ಳಿ ಜಂಕ್ಷನ್
ಮೂಲಕ ಸಾಗಬೇಕು.

