ಮೈಸೂರು: ರಸ್ತೆಗಾಗಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಬೆಳೆ ನಾಶ ಆರೋಪ ಕೇಳಿಬಂದಿದ್ದು, ರಸ್ತೆಗೆ ಜಾಗ ಬಿಡಿಸುವ ನೆಪದಲ್ಲಿ ರೈತರ ಶುಂಠಿ, ಜೋಳ, ತೆಂಗು ಬೆಳೆ ಹಾನಿಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಮೀನಿನ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಅಧಿಕಾರಿಗಳು ಬೆಳೆ ನಾಶ ಪಡಿಸಿದ್ದಾರೆ. ದಾಖಲೆಯಲ್ಲಿ ರಸ್ತೆಗೆ ಜಾಗ ಬಿಡುವಂತೆ ಮಾಹಿತಿ ನೀಡಿದರೆ ನಾವು ಬಿಡಲು ಸಿದ್ಧರಿದ್ದೇವೆ. ಆದ್ರೆ ದುರುದ್ದೇಶವಾಗಿ ಅಧಿಕಾರಿಗಳು ದರ್ಪ ತೋರಿಸಿರುವುದು ಸರಿ ಇಲ್ಲ. ಸಾಮಾನ್ಯ ಜ್ಞಾನವಿಲ್ಲದ ಅಧಿಕಾರಿಗಳು ಎಂದು ರೈತರು ಗುಡುಗಿದ್ದಾರೆ.
ಬೆಳೆ ನಾಶ ಪಡಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ನಷ್ಟವಾದ ಬೆಳೆಗೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

