ಎಚ್.ಡಿ. ಕೋಟೆ: ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಚಾಮರಾಜನಗರ ಸಂಸದ ಸುನೀಲ್ ಬೋಸ್ ಸಾರ್ವಜನಿಕರಿಂದ ಸಮಸ್ತೆ ಆಲಿಸಿ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಪ್ರತಿನಿತ್ಯ ಬಡವರನ್ನ ಯಾಕೆ ಕಛೇರಿಗಳಿಗೆ ಅಲೆಸುತ್ತಿರಿ ನ್ಯಾಯಯುತವಾಗಿ ಆಗಬೇಕಾದ ಕೆಲಸಗಳನ್ನ ತುರ್ತಾಗಿ ಮಾಡಿಕೊಡಿ ಮತ್ತು ಅಧಿಕಾರಿಗಳು ಹೊಂದಾಣಿಕೆ ಯಿಂದ ಕೆಲಸ ಮಾಡಿ ನಿಮಗೆ ನಾವು ಹೇಳಿದ ಮೇಲೂ ಮಾಡಲಾಗಲಿಲ್ಲ ಎಂದರೆ ನಾವು ಶಿಫಾರಸು ಮಾಡಿ ನಿಮ್ಮನ್ನ ನೇಮಿಸಿಕೊಳ್ಳಬೇಕು ಹಾಗಾಗಿ ಅಂಥಹ ಅಧಿಕಾರಿಗಳು ಜಾಗ ಖಾಲಿ ಮಾಡಿ ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ಸಾರ್ವಜನಿಕರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ. ಕಂದಾಯ ಇಲಾಖೆಯ ಮೇಲೆ ನೂರಾರು ದೂರುಗಳು ಕೇಳಿಬಂದವು. ಇದೇ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ತಹಶಿಲ್ದಾರ್ ಶ್ರೀನಿವಾಸ್, ಇಒ ಪ್ರೇಮ್ ಕುಮಾರ್ ಮತ್ತು ತಾಲೋಕು ಮಟ್ಟದ ಅಧಿಕಾರಿಗಳು ಸಂಘ ಸಂಸ್ಥೆಗಳ ಮುಖಂಡರು ಭಾಗಿಯಾಗಿದ್ದರು.