ಮೈಸೂರು: ವಿವಿಯ ಕುಲಪತಿಯ ವಿರುದ್ಧ ನಗರದ ಟೌನ್ ಹಾಲ್ ಬಳಿ ಸಂಶೋಧನ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಎಸ್ಸಿ, ಎಸ್ಟಿ ಸಮುದಾಯದ ಸಂಶೋಧನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡದಿದ್ದಕ್ಕೆ ಪ್ರತಿಭಟನೆ ನಡೆಸಲಾಯಿತು. ಟೌನ್ ಹಾಲ್ ನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿವಿ ವರೆಗೂ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ರ್ಯಾಲಿ ಹೊರಡಿತು. ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಯ ಕುಲಪತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗಿಯಾದರು. ಮೈಸೂರು ವಿವಿಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ನೆಪ ಹೇಳಿ ಫೆಲೋ ಶಿಪ್ ಕೊಡುತ್ತಿಲ್ಲ. ಕಳೆದ 16 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು ಕುಲಪತಿಗಳು ಒಮ್ಮೆ ಯಾರದು ನಮ್ಮ ಕಷ್ಟ ಕೇಳುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆಗೆ ನಾವು ಪ್ರತಿಭಟನೆ ನಡೆಸುತ್ತಿರುವುದೇ ಗೊತ್ತಿಲ್ಲ ಎಂದು ಸಮಾಜಯಿಸಿ ನೀಡುತ್ತಿದ್ದಾರೆ. ರಾಜ್ಯದ ಯಾವುದೇ ವಿವಿ ಗಳಲ್ಲಿ ಫೆಲೋ ಶಿಪ್ ನಿಲ್ಲಿಸಿಲ್ಲ ಆದರೆ ಮೈಸೂರು ವಿವಿಯಲ್ಲಿ ಮಾತ್ರ ಈ ಧೋರಣೆ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ಜನಪ್ರತಿನಿಧಿಗಳು, ಸರ್ಕಾರಗಳು ವಿದ್ಯಾರ್ಥಿಗಳ ಪರವಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.