ಮೈಸೂರು : ಆಹಾರ ಅರಸಿ ಬಂದು ಪಾಳು ಬಾವಿಗೆ ಬಿದ್ದಿದ್ದ ಹಂದಿಯನ್ನು ರಕ್ಷಣೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ನಡೆದಿದೆ.
ತೋಟದಲ್ಲಿನ ತೆರೆದ ಬಾವಿಗೆ ಕಾಡು ಹಂದಿ ಬಿದ್ದಿದೆ. ಹಂದಿ ಚೀರಾಟದ ಶಬ್ದ ಕೇಳಿ ಗ್ರಾಮಸ್ಥರು ರಕ್ಷಣೆಗೆ ಮುಂದಾದರು. ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದರು.
ಡಿಆರ್ಎಫ್ಓ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯಿತು. ಬಲೆ ಸಹಾಯದಿಂದ ಹಂದಿಯನ್ನು ಸಿಬ್ಬಂದಿ ಮೇಲಕ್ಕೆತ್ತಿದರು. ಹಂದಿಯನ್ನು ಮತ್ತೆ ಸಿಬ್ಬಂದಿ ಕಾಡಿಗೆ ಬಿಟ್ಟರು.

