ನಂಜನಗೂಡು: ಶ್ರೀರಾಮ ನವಮಿಯನ್ನು ನಗರದೆಲ್ಲಡೆ ಭಾನುವಾರ ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ನಂಜನಗೂಡು ನಗರದ ಅರ್ .ಪಿ ರಸ್ತೆಯ 17ನೇ ಕ್ರಾಸ್ ನಲ್ಲಿ ಇರುವ ಶ್ರೀ ರಾಮ ಮಂದಿರದಲ್ಲಿ ಬೆಳಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಹಾಗೂ ವಸ್ತ್ರಾಲಂಕಾರ ಸೇವೆ ನಡೆಯಿತು.
ನಂತರ ದೇವಾಲಯ ಆವರಣದಿಂದ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಇರಿಸಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು, ಮಧ್ಯಾಹ್ನ ವಿಶೇಷ ಮಹಾಪೂಜೆ ಬಳಿಕ ಕೋಸಂಬರಿ, ಪಾನಕ, ಮಜ್ಜಿಗೆ, ಅನ್ನಸಂತರ್ಪಣೆ ನಡೆಯಿತು.
ಇನ್ನೂ ನಗರದ ಆಂಜನೇಯ ದೇವಾಲಯಗಳಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಬೆಳಗ್ಗೆ ರಾಮ ತಾರಕ ಹೋಮ, ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು, ಸಾಕಷ್ಟು ಭಕ್ತರು ಪಾಲ್ಗೊಂಡರು.

