ಮೈಸೂರು: ಹರ್ಷವರ್ಧನ್ ನನ್ನು ನಿಮ್ಮ ಮನೆ ಮಗನಂತೆ ಬೆಳೆಸಿ ನಂಜನಗೂಡಿನಲ್ಲಿ ಭಾಗ್ಯಲಕ್ಷ್ಮೀ ಶ್ರೀನಿವಾಸ್ ಪ್ರಸಾದ್ ಮನವಿ ಮಾಡಿಕೊಂಡರು.
ಅಳಿಯನಿಗೆ ಮತ್ತೊಮ್ಮೆ ಅವಕಾಶ ಕೊಡಿ ಎಂದ ಶ್ರೀನಿವಾಸ್ ಪ್ರಸಾದ್ ಪತ್ನಿ ನಂಜನಗೂಡಿನಲ್ಲಿ ನಡೆದ ದಿ.ವಿ.ಶ್ರೀನಿವಾಸ್ ಪ್ರಸಾದ್ ರವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪತ್ನಿ ಭಾಗ್ಯಲಕ್ಷ್ಮೀ ರವರು ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಪತಿಯವರಾದ ಶ್ರೀನಿವಾಸ್ ಪ್ರಸಾದ್ ರವರು ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.
ಎಲ್ಲ ವರ್ಗದ ಜನರ ಏಳಿಗೆಗೆ ಸುದೀರ್ಘವಾಗಿ ಐವತ್ತು ವರ್ಷಗಳ ಕಾಲ ನಿಮ್ಮಗಳ ಸೇವೆ ಮಾಡಿದ್ದಾರೆ. ನಮ್ಮ ಕುಟುಂಬದಿಂದ ನಿಮ್ಮ ಸೇವೆಗಳನ್ನು ಮಾಡಲು ನಮ್ಮ ಅಳಿಯ ಬಿ.ಹರ್ಷವರ್ಧನ್ ರವರಿಗೆ ನಂಜನಗೂಡು ಕ್ಷೇತ್ರದಿಂದ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಿ, ಹರ್ಷವರ್ಧನ್ ನನ್ನು ನಿಮ್ಮ ಮನೆ ಮಗನಂತೆ ಬೆಳೆಸಿ ಶ್ರೀನಿವಾಸ ಪ್ರಸಾದ್ ರವರ ಹೆಸರು ಶಾಶ್ವತವಾಗಿ ಉಳಿಯಲು ಅವಕಾಶ ಮಾಡಿಕೊಡಿ ಎಂದು ಶ್ರೀನಿವಾಸ್ ಪ್ರಸಾದ್ ರವರ ಧರ್ಮಪತ್ನಿ ಭಾಗ್ಯಲಕ್ಷ್ಮೀ ರವರು ನೆರೆದಿದ್ದ ಶ್ರೀನಿವಾಸ್ ಪ್ರಸಾದ್ ರವರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

