ಮೈಸೂರು: ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ಅವರನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಕಬಿನಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಹಿಂದೆ ಉಪವಿಭಾಗಾಧಿಕಾರಿಯಾಗಿ ಇಂದಿನ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿರುವ ಕೆ.ಆರ್.ರಕ್ಷಿತ್ ಹುದ್ದೆ ಅಲಂಕರಿಸಿದ್ದರು. ಕೆ.ಆರ್.ರಕ್ಷಿತ್ ರವರ ಜಾಗಕ್ಕೆ ಆರ್.ಮಂಜುನಾಥ್ ರನ್ನ ಪ್ರಭಾರ ಆಗಿ ನೇಮಕ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

