ತಿ.ನರಸೀಪುರ: ಆರ್ ಮಣಿಕಂಠರಾಜ್ ಗೌಡ 6 ತಿಂಗಳುಗಳ ಕಾಲ ಗಡಿಪಾರು ವಿಚಾರವಾಗಿ ಪೊಲೀಸ್ ಠಾಣಾಧಿಕಾರಿ ಇನ್ಸ್ಪೆಕ್ಟರ್ ಧನಂಜಯವರು  ಸುದ್ದಿಗೋಷ್ಠಿ ನಡೆಸಿದರು.

ಆರ್ ಮಣಿಕಂಠರಾಜ್ ಗೌಡ ಅಲಿಯಾಸ್ ಮಣಿ ರೌಡಿಶೀಟರ್. ಟಿ ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಿಂದ  ಗಡಿಪಾರು ಮಾಡಲಾಗಿದೆ. ಈತನ ಮೇಲೆ ಹಲವಾರು ಕೇಸುಗಳಿದ್ದು  ಮತ್ತು ಇವನ ಉಪಟಳ ಹೆಚ್ಚಾಗಿದ ಹಿನ್ನೆಲೆ ನಮ್ಮ ಮೇಲಾಧಿಕಾರಿಗಳಿಗೆ ಕಾರ್ಯವೈಖರಿಯನ್ನು ಖಂಡಿಸಿ  ಗಡಿಪಾರು ಮಾಡಲಾಗಿದೆ.

ಮೈಸೂರು ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ  ಬಳಗಾನೂರು ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಕಾನೂನು ವ್ಯವಸ್ಥೆಗೆ ಭಂಗ ತರುವ ಪ್ರತಿಯೊಬ್ಬರಿಗೂ ಎಚ್ಚರಿಕೆ ಎಂದು ಇನ್ಸ್ಪೆಕ್ಟರ್ ಧನಂಜಯ್ ಹೇಳಿಕೆ ನೀಡಿದರು.