ಮೈಸೂರು: ಗೋ ಹತ್ಯೆ ವಿಚಾರ ಮೈಸೂರಿಗೆ ಪುನೀತ್ ಕೆರೆಹಳ್ಳಿ ಆಗಮಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿದರು. ಪುನೀತ್ ಕೇರೇಹಳ್ಳಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.

ಗೋ ರಫ್ತು ಮಾರಾಟವನ್ನ ತಡೆಯಬೇಕು. ಮೈಸೂರಿನ ಉದಯಗಿರಿ ಭಾಗದಲ್ಲಿ ಅತೀ ಹೆಚ್ಚು ಗೋ ಹತ್ಯೆ ಆಗ್ತಿದೆ. ಗೋ ಹತ್ಯೆಗೆ ಶಾಸಕ ತನ್ವಿರ್ ಸೇಠ್ ನೇರವಾಗಿ ಬೆಂಬಲ ಕೊಡುತ್ತಿದ್ದಾರೆ. ಗೋ ಹತ್ಯೆ ತಡೆಗೆ ಆದೇಶವಿದ್ರು ಯಾಕೆ ಇದನ್ನ ತಡೆಯಲು ಸಾಧ್ಯವಾಗ್ತಿಲ್ಲ, ಇವತ್ತು ಮೈಸೂರಿಗೆ ಬರ್ತಿರೋ ಕಾರ್ಯಕರ್ತರನ್ನ ರಸ್ತೆ ಮದ್ಯದಲ್ಲೇ ಬಂಧನ ಮಾಡಿದ್ದಾರೆ. ಯಾರು ಏನೇ ಮಾಡಿದ್ರು, ಗೋ ಹತ್ಯೆ ವಿರುದ್ದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಮೈಸೂರಿನಲ್ಲಿ ಹಿಂದೂ ಕಾರ್ಯಕರ್ತ ಪುನೀತ್ ಕೇರಹಳ್ಳಿ ಹೇಳಿಕೆ ನೀಡಿದರು.

ಡಿಸಿ ಕಚೇರಿ ಒಳಗೆ ಹೋಗಲು ಪುನೀತ್ ಕೆರೆಹಳ್ಳಿ ಹಾಗೂ ಹಿಂದೂ ಕಾರ್ಯಕರ್ತರು ಯತ್ನಿಸಿದರು. ಗೇಟ್ ನಲ್ಲೇ ಎಲ್ಲರನ್ನೂ ಪೊಲೀಸರು ತಡೆದರು. ಗೇಟ್ ಒಳಗೆ ಹೋಗಲು ಯತ್ನಿಸಿದರು. ಪುನೀತ್ ಕೆರೆಹಳ್ಳಿ ಹಾಗೂ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಪೊಲೀಸರು ಕರೆದೊಯ್ದರು. ಡಿಸಿ ಕಚೇರಿಯಿಂದ ಪೊಲೀಸರು ಕರೆದೊಯ್ದರು.