ಮೈಸೂರು : ಕಡೆ ಆಷಾಢ ಶುಕ್ರವಾರದ ಪೂಜಾ ಸಂಭ್ರಮ ನಡೆಯಿತು. ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಕೊನೆಯ ಆಷಾಢ ಶುಕ್ರವಾರ ಹಿನ್ನಲೆ ಭಕ್ತಾದಿಗಳ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ.
ಮೆಟ್ಟಿಲುಗಳ ಮೂಲಕವೂ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ಪಾದದಿಂದ ಮೆಟ್ಟಿಲುಗಳ ಮೂಲಕ ಭಕ್ತರು ಬೆಟ್ಟಕ್ಕೆ ಹೋಗುತ್ತಿದ್ದಾರೆ. ಮೆಟ್ಟಿಲುಗಳಿಗೆ ಅರಿಸಿಣ ಕುಂಕುಮ ಹಚ್ಚಿ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.
ಸಾವಿರದ ಒಂದು ಮೆಟ್ಟಿಲು ಹತ್ತಿ ಭಕ್ತರು ಬರುತ್ತಿದ್ದಾರೆ. ಮೆಟ್ಟಿಲುಗಳ ಮಾರ್ಗಗಳಲ್ಲು ಕಿಕ್ಕಿರುದು ಭಕ್ತರು ತುಂಬಿದ್ದಾರೆ. ಪಾದದಿಂದ ಮೆಟ್ಟಿಲು ಹತ್ತುವ ಮಾರ್ಗದಲ್ಲೂ ಕ್ಯೂ ಇದ್ದು, ಭಕ್ತರ ಸಂಖ್ಯೆ ಹೆಚ್ಚಳದಿಂದ ಮೆಟ್ಟಿಲು ಮಾರ್ಗದಲ್ಲೂ ಭಕ್ತರು ಪರದಾಡುತ್ತಿದ್ದಾರೆ.

