ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿದೆ. ಹಣಕೊಟ್ಟು ಪಾಸ್ ಪಡೆದುಕೊಂಡ ಪ್ರವಾಸಿಗರನ್ನು ಅರಮನೆ ಒಳಗಡೆ ಬಿಡದೆ ಬಾಗಿಲನ್ನು ಬಂದು ಮಾಡಲಾಗಿತ್ತು.
ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವರಹ ಗೇಟ್ ಬಾಗಿಲನ್ನು ಜಗ್ಗಾಡಿಸಿ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದರು.
ಒಳಗಡೆ ಬಿಡದ ಮೇಲೆ ಪಾಸುಗಳನ್ನು ಏಕೆ ಕೊಡಬೇಕು ಎಂದು ಪೊಲೀಸರು ಮತ್ತು ಪ್ರವಾಸಿಗರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

