ಸರಗೂರು: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಮೈಸೂರು ಇವರ ವತಿಯಿಂದ ಸಾರ್ವಜನಿಕರ ಕುಂದು ಕೊರತೆ ದೂರು ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಒಂದು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಿಂತ ಅಧಿಕಾರಿಗಳ ಸಂಖ್ಯೆ ಹೆಚ್ಚಿನದಾಗಿತ್ತು. ಕಾರಣ, ಈ ಒಂದು ಕಾರ್ಯಕ್ರಮದ ಮಾಹಿತಿ ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪದೇ ಸಂಬಂಧಪಟ್ಟ ಇಲಾಖೆಯವರು ಮಾಹಿತಿಯನ್ನ ಸರಿಯಾದ ರೀತಿಯಲ್ಲಿ ನೀಡದ ಕಾರಣ ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು. ಆದರೂ ಬಂದಂತಹ  ಸಾರ್ವಜನಿಕರು ಅಧಿಕಾರಿಗಳ ಭ್ರಷ್ಟಚಾರವನ್ನು ಲೋಕಾಯುಕ್ತ ಅಧಿಕಾರಗಳ ಮುಂದೆ ತಿಳಿಸಿದರು.

ಹಾಗೂ  ಸಾರ್ವಜನಿಕರಿಂದ ಒಟ್ಟು 46 ದೂರುಗಳನ್ನು ಸ್ವೀಕರಿಸಲಾಯಿತು, ಬಹುಪಾಲು 35 ಪ್ರಕರಣಗಳು ಕಂದಾಯ ಇಲಾಖೆಗೆ ಸಂಬಂಧಿಸಿದಾಗಿತ್ತು. ಇಲ್ಲಿ ಸಾರ್ವಜನಿಕರು ಹಿಂದೆ ನಡೆದಂತಹ ಸಭೆಯಲ್ಲಿ ಬಂದಂತಹ ದೂರುಗಳಿಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ತಲುಪದೆ ಇರುವುದು. ಕೆಲವು ಕಾಲ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಆನಂತರದಲ್ಲಿ ಬಂದಂತಹ ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳದಲ್ಲಿ ಅದಕ್ಕೆ ಕ್ರಮ ವಹಿಸುವಂತೆ ಮುಂದಿನ ದಿನಗಳಲ್ಲಿ ಪರಿಹಾರ ನೀಡುವಂತೆ ಸೂಚಿಸಲಾಯಿತು‌.

ಇದೇ ಸಂದರ್ಭದಲ್ಲಿ ಅಬಕಾರಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಭ್ರಷ್ಟಾಚಾರವನ್ನು ಲಂಕೆ  ರಮೇಶ್, ಹಿಟ್ನಾ ರಾಜಣ್ಣ, ಸಣ್ಣ ಸ್ವಾಮಿ, ಶಿವಣ್ಣ, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹಾಗೂ ಕಸಪಾ ಅಧ್ಯಕ್ಷ ಕೆಂಡಗಣಸ್ವಾಮಿ, ಮಲ್ಲೇಶ್ ಚೆನ್ನಿ ಪುರ  ಹೀಗೆ ಅನೇಕರು ಅಧಿಕಾರಿಗಳನ್ನು ಪ್ರಶ್ನಿಸಿ ತಮ್ಮ ಆಕ್ರೋಶವನ್ನ ಹೊರಹಾಕಿದರು.

ಈ ಕಾರ್ಯಕ್ರಮದಲ್ಲಿ ಸರಗೂರು ತಾಲ್ಲೂಕು ದಂಡಾಧಿಕಾರಿ ಮೋಹನ್ ಕುಮಾರಿ, ಆರಕ್ಷಕ ವೃತ್ತ ನಿರೀಕ್ಷಕ ಪ್ರಸನ್ನ, ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ವೆಂಕಟೇಶ್, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆದ ರವಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.