ಮದ್ದೂರು : ಮದ್ದೂರು ಬಿಜೆಪಿ ಶೋಭಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದ MLC ಸಿಟಿ ರವಿ ವಿರುದ್ಧ ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಪಿಎಸ್ ಐ ಮಂಜನಾಥ್ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಮದ್ದೂರಿನಲ್ಲಿ ನಡೆದ ಶೋಭಾಯಾತ್ರೆ ವೇಳೆ ಆಕ್ಷೇಪಾರ್ಹ, ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬಿಜೆಪಿ MLC ಸಿ.ಟಿ ರವಿ ಬುಧವಾರ ಮದ್ದೂರಿನಲ್ಲಿ ಭಾಷಣ ವೇಳೆ ಮುಸ್ಲಿಮರ “ಶಿರಚ್ಛೇದ” ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಮಾತಿಗೆ ಆಕ್ಷೇಪ ವ್ಯಕ್ತವಾಗಿತ್ತು. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.
ಕಳೆದ ಭಾನುವಾರ ಸಂಜೆ ಮದ್ದೂರಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಪ್ರತಿಕ್ರಿಯೆಯಾಗಿ ಹಿಂದುತ್ವ ಸಂಘಟನೆಗಳು ರ್ಯಾಲಿಯನ್ನು ಆಯೋಜಿಸಿದ್ದವು. ನಮ್ಮ ಮೇಲೆ ಕಲ್ಲು ಎಸೆದವರನ್ನು ಸಮಾಧಿ ಮಾಡುವ ಅಧಿಕಾರ ನಮಗಿದೆ. ಹಿಂದೂ ಸಮಾಜಕ್ಕೆ ಆ ಅಧಿಕಾರವಿದೆ. ನಾವು ಟಿಪ್ಪು ಮತ್ತು ಅವನ ತಂದೆಯನ್ನು ಬಿಡಲಿಲ್ಲ.
ನೀವು ತೊಡೆ ತಟ್ಟಿ ನಮಗೆ ಸವಾಲು ಹಾಕಬೇಡಿ ನಾವು ನಿಮ್ಮ ತೊಡೆಗಳನ್ನು ಮುರಿದು ನಿಮ್ಮ ತಲೆಯನ್ನು ತೆಗೆಯುತ್ತೇವೆ ಎಂದಿದ್ದರು. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವನ್ನು ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರ ಎಂದು ಆರೋಪಿಸಿದ ರವಿ, ಸಿದ್ದರಾಮಯ್ಯ ನೀವು ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯುತ್ತೀರಿ ಎಂದು ಭಾವಿಸಬೇಡಿ. ಈ ದೇಶ ನಾಶವಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು.

