ಮೈಸೂರು : ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ವಿಚಾರವಾಗಿ ವೀರೆಂದ್ರ ಹೆಗ್ಗಡೆ ಪರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಧರ್ಮಸ್ಥಳದ ಬಗ್ಗೆ ಅವಹೇಳನಕಾಕರಿ ಹೇಳಿಕೆ ಖಂಡಿಸಿ ಶಾಂತಿಯುತ ಮೌನ ಪ್ರತಿಭಟನೆ ಮೈಸೂರಿನ ಗಾಂಧಿ ವೃತ್ತದಲ್ಲಿ ಶ್ರೀ ದಿಗಂಬರ ಜೈನ ಸಮಾಜದಿಂದ ಪ್ರತಿಭಟನೆ ನಡೆಯಿತು.

108 ಆಚಾರ್ಯ ಶ್ರೀ ಪುಣ್ಯಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ನಡೆದ ಶಾಂತಿಯುತ ಮೌನ ಪ್ರತಿಭಟನೆ ನಡೆಸಿ ಶ್ರೀ ದಿಗಂಬರ ಜೈನ ಸಮಾಜದ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾದರು. ಭಿತ್ತಿ ಪತ್ರ ಹಿಡಿದು  ಜೈನ ಸಮಾಜದ ಬಾಂಧವರು ಮೌನ ಪ್ರತಿಭಟನೆ ಮಾಡಿದರು.