ಮೈಸೂರು : ಕನ್ನಡ ಕುರಿತು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವಿಚಾರವನ್ನು ಖಂಡಿಸಿ ಕರ್ನಾಟಕ ಹಿತರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ವಿನಯ್ ನೇತೃತ್ವದಲ್ಲಿ ಮೈಸೂರಿನ ದೇವರಾಜ್ ಅರಸು ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಮಲ್ ಹಾಸನ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರಿಗೆ ಕ್ಷಮೆ ಕೇಳುವಂತೆ ಪ್ರತಿಭಟನಕಾರರು ಒತ್ತಾಯಿಸಿದರು. ಈ ವೇಳೆ ಪ್ರತಿಭಟನೆಯಲ್ಲಿ ನಜರಬಾದ್ ನಟರಾಜ್, ಮಾಜಿ ಮುಡಾ ಸದಸ್ಯ ನವೀನ್, ಉಮೇಶ್, ರವಿ, ಕಣ್ಣನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

