ಮೈಸೂರು : ಹುಣಸೂರು ಖ್ಯಾತ ವಕೀಲ ನಾಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಹುಣಸೂರಿನ ಗೋಕುಲ ಬಡಾವಣೆ ನಿವಾಸಿ ಕೆ.ರಾಜು (52) ನಾಪತ್ತೆಯಾದ ವಕೀಲ. ನಿನ್ನೆ ಆಫೀಸ್‌ಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ವಕೀಲ ತೆರಳಿದ್ದರು.

ರಾತ್ರಿಯಾದರೂ ವಾಪಸ್ ಬಾರದ ಹಿನ್ನಲೆ ಕುಟುಂಬಸ್ಥರಿಂದ ಹುಡುಕಾಟ ನಡೆಯಿತು. ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ವಕೀಲನ ಕಾರು ಪತ್ತೆಯಾಗಿದೆ.

ನದಿ ಬಳಿ ಕಾರು ಪತ್ತೆಯಾದ ಹಿನ್ನಲೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ನದಿಯಲ್ಲಿ ನಾಪತ್ತೆಯಾಗಿರುವ ವಕೀಲ ಕೆ.ರಾಜುವಿಗಾಗಿ ಹುಡುಕಾಟ ನಡೆಯುತ್ತಿದೆ.  ನಾಪತ್ತೆಯಾದ ಕೆ.ರಾಜು ಪತ್ನಿ ವಸಂತಲಕ್ಷ್ಮೀಯಿಂದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತರ ಸಂಬಂಧ ದೂರು ನೀಡಲಾಗಿದೆ.