ಮೈಸೂರು: ಖ್ಯಾತ ಕಾನೂನು ತಜ್ಞ ಪ್ರೊ. ಅಜ್ಜಪ್ಪ (95) ಅವರು ವಯೋಸಹಜವಾಗಿ ಇಂದು ವಿಧಿವಶರಾಗಿದ್ದಾರೆ .ಇಂದು ಅವರ ಮೈಸೂರಿನ ಕುವೆಂಪು ನಗರದ ಅನಿಕೇತನ ರಸ್ತೆಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಮೂಲತಃ ದಾವಣಗೆರೆಯ ಡಿ ದುರ್ಗ ಗ್ರಾಮದವರು.

ಜೆಎಸ್ಎಸ್​ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಕೀಲರಾಗಿ ಸೇವೆಸಲ್ಲಿರುವ ಅವರು ಬಡವರ ಪರ ಧ್ವನಿಯಾಗಿದ್ದರು. ಜೊತೆಗೆ ಕಾನೂನು ವಿಚಾರವಾಗಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಿದ್ದರು. ಇಂದು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.