ಮೈಸೂರು: ನಂಜನಗೂಡಿನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ನಂಜನಗೂಡು ತಾಲ್ಲೂಕಿನಲ್ಲಿ ವರುಣ ಕ್ಷೇತ್ರಕ್ಕೂ ಸೇರುತ್ತದೆ. ಯಾವ ಸಮುದಾಯ ಕಡಿಮೆ ಜನಸಂಖ್ಯೆ ಇದೆ ಅವರನ್ನು ಗುರುತಿಸಿ ಅವರಿಗೆ ಅಭಿವೃದ್ಧಿಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ.
ರಸ್ತೆ ಚರಂಡಿ ಶಾಲಾ ಕೋಟಿಗಳು ಸರಿದಂತೆ 34 ಕೋಟಿ ನೀಡಿದ್ದೇವೆ. ಉಪ್ಪಾರ ಸಮುದಾಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಉಪ್ಪಾರ ಭವನಕ್ಕೆ ಎರಡು ಕೋಟಿ ಅನುದಾನ ನೀಡಿದ್ದೇವೆ. 2.20 ಕೋಟಿ ರೂ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಅಡಿಗಲ್ಲು. ನಿರ್ಮಾಣಕ್ಕೆ ಎಷ್ಟು ಅನುದಾನವಾಗುತ್ತದೆ ಅಷ್ಟನ್ನು ಸರ್ಕಾರದಿಂದ ನೀಡುತ್ತೇವೆ.
ಸಿದ್ದರಾಮಯ್ಯರವರಿಂದಲೇ ಸಮುದಾಯ ಭವನವನ್ನು ಉದ್ಘಾಟಿಸುತ್ತೇವೆ. ಉಪ್ಪಾರ ಸಮುದಾಯ ಹಿಂದುಳಿದಿದೆ. ಶೈಕ್ಷಣಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಮುಂದೆ ಬರಬೇಕಾಗಿದೆ. ಜನಾಂಗವನ್ನು ಸಂಘಟನೆ ಮಾಡಿ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪ್ರತಿ ಗ್ರಾಮದಲ್ಲೂ ಜಯಂತಿ ಕಾರ್ಯಕ್ರಮಗಳು ನಡೆಯಬೇಕು.
ಯಾವುದೇ ಸಮುದಾಯಗಳು ಅಭಿವೃದ್ಧಿಯಾಗಬೇಕಾದರೆ ಡಾ.ಬಿಆರ್ ಅಂಬೇಡ್ಕರ್ ಅವರು ಶಿಕ್ಷಣವನ್ನು ನೀಡಿದ್ದಾರೆ. ಶಿಕ್ಷಣ ಸಂಘಟನೆ ಹೋರಾಟ ಎಂದು ಅಂಬೇಡ್ಕರ್ ಅವರು ಕೊಟ್ಟಿದ್ದಾರೆ.
ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಬೇಕು. ನಿಮ್ಮ ಅಭಿವೃದ್ಧಿಗೋಸ್ಕರ ನಾವು ಬದ್ಧರಾಗಿರುತ್ತೇವೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.

