ಮೈಸೂರು: ಮೋದಿಯವರು ಆಗಸ್ಟ್ 1ರಂದು ವಿವೇಕಾನಂದ ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ. ಮದ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿಯವರು ಆಗಮಿಸಲಿದ್ದಾರೆ. ಮೋದಿಯವರ ಕೈಯಿಂದಲೇ ಸ್ಮಾರಕ ಉದ್ಘಾಟನೆ ಮಾಡಬೇಕೆಂಬುದು ಸ್ವಾಮೀಜಿಗಳ ಆಸೆ ಇತ್ತು. ಅವರ ಆಸೆಯಂತೆ ಸ್ಮಾರಕ ಉದ್ಘಾಟನೆ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿನಲ್ಲಿ ವಿಜಯೇಂದ್ರ ತಿಳಿಸಿದ್ದಾರೆ.

ಮುಕ್ತದಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶಿಲ್ಪಾ ಸಾಧನೆ ಹೆಮ್ಮೆ ಪಡುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳೆಗಳಿಗೆ ಕಾವೇರಿ ನೀರು ಹರಿಸಲು ಸಾಧ್ಯ ಇಲ್ಲಾ ಎಂದು ಸಿಎಂ ಹೇಳಿದ್ರು.ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತಿದೆ ಸರ್ಕಾರದ ಧೋರಣೆ. ಕಾವೇರಿ ನಿರ್ವಹಣಾ ಸಮಿತಿ ಮುಂದೆ ಸರಿಯಾದ ವಾದ ಮಂಡನೆ ಮಾಡಿಲ್ಲ ಇದರ ಪರಿಣಾಮ ಈ ತೀರ್ಪು ಬಂದಿದೆ.

ರೈತರ ರಕ್ಷಣೆಗೆ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಬೇಕು. ನಮ್ಮ ರೈತರಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದ್ದಾರೆ. ಈ ಮುಂಚೆಯು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಕಿಡಿ ಕಾರಿದರು.ಸಚಿವ ಸ್ಥಾನಕ್ಕೆ ರೇಟ್ ಫಿಕ್ಸ್ ಆಗಿಲ್ಲ ಆದ್ರಿಂದ ವಿಸ್ತರಣೆ ಮುಂದಕ್ಕೆ ಹೋಗುತ್ತಿದೆ. ಹೀಗಾಗಿ ನಾಳೆ ನಾಳೆ ಅಂತ ಮುಂದೆ ಹೋಗುತ್ತಿದೆ.ಸಚಿವ ಸಂಪುಟ ವಿಸ್ತರಣೆಯಲ್ಲೇ ಸಿಎಂ ತಲ್ಲಿನರಾಗಿದ್ದಾರೆ ಎಂದು ಟೀಕಿಸಿದರು.