ಮೈಸೂರು: ಕಾರಿನಲ್ಲಿ ಇಟ್ಟಿದ್ದ ಪ್ರೆಸ್ ರಿಪೋರ್ಟರ್ ರಿವಾಲ್ವರ್ ಕಾಣೆಯಾಗಿರುವ ಪ್ರಕರಣ ಎನ್.ಆರ್. ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಡ್ರೈವರ್ ಸೀಟ್ ನ ಜಿಪ್ ಪರ್ಸ್ ನಲ್ಲಿ ಇಡಲಾಗಿದ್ದ .22 ಬೋರ್ ರಿವಾಲ್ವರ್ ಹಾಗೂ ಲೋಡ್ ಮಾಡಲಾಗಿದ್ದ 8 ಜೀವಂತ ಗುಂಡುಗಳು ನಾಪತ್ತೆಯಾಗಿದೆ.
ಕಾರನ್ನ ರಿಪೇರಿಗಾಗಿ ಬಿಟ್ಟ ವೇಳೆ ಕಳ್ಳತನವಾಗಿದೆ ಎಂದು ಆರೋಪಿಸಿ ಪ್ರೆಸ್ ರಿಪೋರ್ಟರ್ ಆಗಿರುವ ಕುಶಾಲನಗರ ಮಂಗಲಾ ಗ್ರಾಮದ ಕಾಫಿ ಎಸ್ಟೇಟ್ ಮಾಲೀಕ ತಿಮ್ಮಯ್ಯ (52) ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಆತ್ಮರಕ್ಷಣೆಗಾಗಿ ತಿಮ್ಮಯ್ಯ 2016 ರಲ್ಲಿ 22 ಬೋರ್ ರಿವಾಲ್ವರ್ ಖರೀದಿಸಿ 100 ಲೈವ್ ಬುಲೆಟ್ ಗಳನ್ನೂ ಸಹ ಖರೀದಿಸಿದ್ದರು. ತಮ್ಮ ಫೋರ್ಡ್ ಕಾರನ್ನ ರಿಪೇರಿ ಮಾಡಿಸುವ ಸಲುವಾಗಿ ಮೈಸೂರಿಗೆ ಬಂದಿದ್ದಾರೆ.
ತಮ್ಮ ಪ್ಯಾಂಟ್ ಜೇಬಿನಲ್ಲಿದ್ದ ರಿವಾಲ್ವರ್ ಹಾಗೂ 8 ಜೀವಂತ ಗುಂಡುಗಳನ್ನ ಡ್ರೈವರ್ ಸೀಟ್ ನ ಜಿಪ್ ಪರ್ಸ್ ನಲ್ಲಿಟ್ಟಿದ್ದಾರೆ. ರಿಪೇರಿಗಾಗಿ ಟಿಪ್ಪು ಸರ್ಕಲ್ ಬಳಿ ಇರುವ ಗ್ಯಾರೇಜ್ ನಲ್ಲಿ ಬಿಡುವ ಸಮಯದಲ್ಲಿ ರಿವಾಲ್ವರ್ ತೆಗೆದುಕೊಂಡಿಲ್ಲ. ನಂತರ ರಿಪೇರಿಯಾದ ಕಾರನ್ನ ಹಿಂಪಡೆದು ತಾವು ತಂಗಿದ್ದ ಲಾಡ್ಜ್ ಗೆ ತಲುಪಿ ಪರಿಶೀಲಿಸಿದಾಗ ರಿವಾಲ್ವರ್ ನಾಪತ್ತೆಯಾಗಿದೆ.
ಗ್ಯಾರೇಜ್ ಮಾಲೀಕನನ್ನ ಕೇಳಿದಾಗ ಗೊತ್ತಿಲ್ಲವೆಂದು ತಿಳಿಸಿದ್ದಾನೆ. ಕಾಣೆಯಾದ ತಮ್ಮ ರಿವಾಲ್ವರ್ ಪತ್ತೆಹಚ್ಚಿಕೊಡುವಂತೆ ತಿಮ್ಮಯ್ಯ ರವರು ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

