ತಿ. ನರಸೀಪುರ: ತುಂಬಲ ಗ್ರಾಮದ ಯುವಕರ ಮೇಲೆ ನಡೆದಿರುವ ಪೋಲಿಸ್ ದೌರ್ಜನ್ಯ ವಿಚಾರವಾಗಿ ನೊಂದವರ ಪರವಾಗಿ ನಿಲ್ಲಬೇಕಾಗಿದ್ದ ದಲಿತಪರ  ಕೆಲವು ಸಂಘಟನೆಗಳು  ಅಧಿಕಾರಿಯ ಪರವಾಗಿ ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ನೀಡುತ್ತಿರುವುದು ದಲಿತ ಸಮುದಾಯಕ್ಕೆ ಮಾಡಿದ  ದ್ರೋಹ ಎಂದು ಅಖಿಲ ಕರ್ನಾಟಕ ಪರಿಶಿಷ್ಟರ ಮಹಾಸಭಾದ ಅಧ್ಯಕ್ಷ ಸೋಸಲೆ ಶಶಿಕಾಂತ್ ಕಿಡಿಕಾರಿದರು.

ಕೆಲವು ಸಂಘಟನೆ ಮುಖಂಡರು ಇನ್ಸ್ಪೆಕ್ಟರ್ ಧನಂಜಯ ಮತ್ತು ಪೋಲಿಸರನ್ನು ಒಲೈಕೆ ಮಾಡಿಕೊಂಡು ತಮ್ಮ ಕೆಲಸ ಮಾಡಿಕೊಳ್ಳವ ಬರದಲ್ಲಿ ಒಬ್ಬರ ಮೇಲೊಬ್ಬರು ಸರತಿ ಸಾಲಿನಲ್ಲಿ ನಿಂತು ಅಧಿಕಾರಿಯ ಪರವಾಗಿ ಹೇಳಿಕೆ ನೀಡುತ್ತಿರುವುದು ದುರದುಷ್ಟಕರ ಸಂಗತಿಯಾಗಿದೆ. ಅಲ್ಲದೆ ನೊಂದ ದಲಿತರ ಶೋಷಣೆಯ ಮುಂದುವರಿದ ಭಾಗವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲವು ಮೂರು ದಿನಗಳಿಂದ ಪ್ರತಿನಿತ್ಯ ಅಧಿಕಾರಿಗಳ ಪರ ಮತ್ತು ವಿರೋಧ ಮಾಧ್ಯಮಗಳಲ್ಲಿ ಬಿತ್ತಾರವಾಗುತ್ತಿದೆ. ಇಂಥ ಹೇಳಿಕೆಗಳಿಂದ ಟಿ ನರಸೀಪುರ ತಾಲೂಕಿನಲ್ಲಿ ಅಶಾಂತಿ ಉಂಟಾಗಿ ಘರ್ಷಣೆಗಳಿಗೆ ಕಾರಣವಾಗುತ್ತದೆ. ಸರ್ಕಾರ ಗಮನಹರಿಸಿ ಯುವಕರ ಮೇಲೆ ದೌರ್ಜನ್ಯ ವೆಸಗಿರುವ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ದೌರ್ಜನ್ಯ ಕೊಳಗಾದ ಯುವಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಪರಿಶಿಷ್ಟರ ಮಹಾಸಭಾದ ಅಧ್ಯಕ್ಷ ಸೋಸಲೆ ಶಶಿಕಾಂತ್,ಸೋಸಲೆ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನಿರ್ದೇಶಕ ಸೋಸಲೆ  ಎಸ್ ನಂಜುಂಡಯ್ಯ,ಮಾಜಿ ಗ್ರಾ.ಪಂ.ಅಧ್ಯಕ್ಷ ಕೊಳತ್ತೂರು ಸೋಮಣ್ಣ, ದಲಿತ ಸಂಘರ್ಷ ಸಮಿತಿ‌ ಮುಖಂಡ ಕೆ. ಎಂ. ಮಂಜುನಾಥ್ ಹಾಜರಿದ್ದರು.

ಇನ್ಸ್ಪೆಕ್ಟರ್ ಧನಂಜಯ ರವರಿಂದ ದೌರ್ಜನ್ಯಕ್ಕೆ ಒಳಗಾದ ದಲಿತ ಯುವಕರನ್ನು ಬೆದರಿಸಿ ಅಧಿಕಾರಿ ಪರ ಹೇಳಿಕೆ ನೀಡುವಂತೆ ಕೆಲವು ದಲಿತ ಮುಖಂಡರು ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ.ಅಲ್ಲದೆ ಈ ವಿಚಾರವಾಗಿ ಇನ್ಸ್ಪೆಕ್ಟರ್ ಧನಂಜಯ ರವರನ್ನು ಸಂತೃಷ್ಟಿಗೊಳಿಸಲು ಅವರ ಪರವಾಗಿ ಸಂಘಟನೆಯ ಕೆಲವು ಮುಖಂಡರು ನಿಲ್ಲುತ್ತಿದ್ದಾರೆ ಇನ್ನು ಘಟನೆಯನ್ನು ಕೆಲವರು ಖಂಡಿಸುತ್ತಿದ್ದಾರೆ ಇದರಿಂದ ಸಂಘಟನೆ ಮುಖಂಡರ ನಡುವೆ ದ್ವೇಷ ಉಂಟಾಗಿ ಗಲಾಟೆ ಸಂಭವಿಸಲಿದೆ ಅಲ್ಲದೆ ತಾಲ್ಲೂಕಿನಲ್ಲಿ ಆಶಾಂತಿ ನಿರ್ಮಾಣವಾಗುವ ಸಂಭವ ಇದೆ” ಎಂದು ಸೋಸಲೆ ಶಶಿಕಾಂತ್.ಅಧ್ಯಕ್ಷರು ಅಖಿಲ ಕರ್ನಾಟಕ ಪರಿಶಿಷ್ಟರ ಮಹಾಸಭಾ ಇವರು ಹೇಳಿದರು.

” ಘಟನೆ ನಡೆದಿರುವ ಸ್ಥಳ ಸಿ.ಎಂ.ಸಿದ್ದರಾಮಯ್ಯ ಮತ್ತು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ರವರ ವ್ಯಾಪ್ತಿಗೆ ಬರಲಿರುವುದರಿಂದ ಕೊಡಲೇ ದೌರ್ಜನ್ಯ ವ್ಯಸಗಿರುವ ಇನ್ಸ್ಪೆಕ್ಟರ್ ಧನಂಜಯ ಮತ್ತು ಸಬ್ ಇನ್ಸ್ಪೆಕ್ಟರ್ ಜಗದೀಶ್ ದೂಳಶೆಟ್ಟಿ ರವರನ್ನು ವರ್ಗಾವಣೆ ಮಾಡಬೇಕು ಅವರ ಮೇಲೆ ಇಲಾಖೆ ತನಿಖೆ ಆಗಬೇಕು ತಪ್ಪು ಮಾಡಿದ್ದರೆ ಮುಲಾಜಿಲ್ಲದೆ ಅಮಾನತ್ತು ಮಾಡಬೇಕು” ಎಂದು ಸೋಸಲೆ ನಂಜುಂಡಯ್ಯ ನಿರ್ದೇಶಕರು ಸೋಸಲೆ ಕೃಷಿ ಪತ್ತಿನ ಸಹಕಾರ ಸಂಘ ಇವರು ಹೇಳಿದರು.