ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಸಂಸದ ಸುನಿಲ್ ಬೋಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ ನಡೆಸಲಾಯಿತು.

ದಿನಾಂಕ 31- 1 2025 ರಿಂದ ಅಂಕುರಾರ್ಪಣ ದಿಂದ ದಿನಾಂಕ 16.2.2025ರ ಮಹಾಭಿಷೇಕ ಶೆಟ್ಟರ ಸೇವೆ 17 ದಿನಗಳ ಕಾಲ ನಡೆಯುವ ಮುಡುಕುತೊರೆ ಜಾತ್ರಾ ಮಹೋತ್ಸವದ ವಿವಿಧ ಪೂಜಾ ಕೈ ಕಾರ್ಯಗಳು ಕಾರ್ಯಕ್ರಮಗಳು . ದಿನಾಂಕ 7- 2- 2025 ಶುಕ್ರವಾರದಂದು ಶ್ರೀ ಮದ್ವಿದ್ಯಾ ಬ್ರಹ್ಮರಥೋತ್ಸವ ಜರಗಲಿದೆ. ದಿನಾಂಕ 10.02.2025 ಸೋಮವಾರ ತೆಪ್ಪೋತ್ಸವ ನಡೆಯಲಿದೆ.

ಪೂರ್ವಭಾವಿ ಸಭೆ ಕುರಿತು ಸಂಸದ ಸುನೀಲ್ ಬೋಸ್ ಮಾತನಾಡಿ ಮುಡುಕುತೊರೆ ಧಾರ್ಮಿಕ ಜಾತ್ರಾ ಮಹೋತ್ಸವ ಐತಿಹಾಸಿಕ ಇತಿಹಾಸವುಳ್ಳ ಜಾತ್ರೆಯಾಗಿದ್ದು, ಜಾತ್ರೆಯಲ್ಲಿ ಬರುವಂತಹ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಎಲ್ಲೂ ಯಾವುದರಲ್ಲೂ ಕೊರತೆ ಹಾಗೂ ಲೋಪ ಆಗದಂತೆ ನೋಡಿಕೊಳ್ಳಬೇಕು ಜಾತ್ರೋತ್ಸವ ಮುಗಿದ ಮೇಲು ಸ್ವಚ್ಛವಾಗಿಡಬೇಕು ಎಂದು ತಾಕೀತು ಮಾಡಿದರು.