ತಿ. ನರಸೀಪುರ: ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಉಪಾ ತಹಶೀಲ್ದಾರ್ ರಾಜಕಾಂತ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಜಯಂತಿಯನ್ನು ಮೂರು ದಿನ ಇದೆ ಹೇಗೆ ಕಾರ್ಯಕ್ರಮ ಮಾಡುತ್ತೀರಿ ಒಕ್ಕಲಿಗ ಸಮುದಾಯದ ಮುಖಂಡರಿಗೆ ಸರಿಯಾಗಿ ಮಾಹಿತಿ ನೀಡದೆ ಪೂರ್ವಭಾವಿ ನಡೆಸುತ್ತಿದ್ದೀರಿ ಎಂದು ಮುಖಂಡರು ಬೇಸರ ಪಡಿಸಿದರು.

ತಾಲೂಕು ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮತ್ತು ವಿಚಾರವಾದಿ ಕರೊವಟ್ಟಿ ಪ್ರಭುಸ್ವಾಮಿ ಸಭೆಗೆ ಬೇಸರ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು. ಒಕ್ಕಲಿಗ ಸಮುದಾಯದ ಮುಖಂಡರಾದ ಸ್ವಾಮಿನಾಥನ್ ಮತ್ತು ಪುರಸಭೆ ನಾಮ ನಿರ್ದೇಶಿತ ಸದಸ್ಯ ಚೇತನ್ ಮಾತನಾಡಿ ನಾಡಪ್ರಭು ಕೆಂಪೇಗೌಡರ ಜಯಂತಿಯ ಪೂರ್ವಸಭೆಯನ್ನು ಸಮುದಾಯದ ಇನ್ನು ಹಲವಾರು ಮುಖಂಡರುಗಳಿಗೆ ತಿಳಿಸದಿರುವುದು ತಾಲೂಕು ಆಡಳಿತದ ತಪ್ಪು ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು. ದಿನಾಂಕ 27ರಂದು ನಡೆಯಲಿರುವ ನಾಡಪ್ರಭುಕೆಂಪೇಗೌಡರ ಜಯಂತಿಗೆ ಭಾಗವಹಿಸಿ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸೋಣ ಎಂದರು

ಒಕ್ಕಲಿಗ ಸಮುದಾಯದ ಆರ್ ಮಣಿಕಂಠರಾಜ ಗೌಡ ತಾಲೂಕು ಆಡಳಿತ ನಮ್ಮ ಸಮುದಾಯದ ಮುಖಂಡರನ್ನು ಕಡೆಗಣಿಸುತ್ತಿದೆ. ತಾಲೂಕು ಆಡಳಿತ ಮಾಡುವ ಕಾರ್ಯಕ್ರಮಕ್ಕೆ ನಾವ್ಯಾರು ಹೋಗದೆ ಒಂದು ಸಭೆ ನಡೆಸಿ ರಾಜಕೀಯ ಮುಖಂಡರು ಶ್ರೀ ನಿರ್ಮಲಾನಂದ ಸ್ವಾಮೀಜಿಗಳನ್ನು ಆಹ್ವಾನಿಸಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.