ತಿ. ನರಸೀಪುರ: 2025-26ನೇ ಸಾಲಿನ ಆಯಾವ್ಯಯದ ಪೂರ್ವಭಾವಿ ಸಭೆಯನ್ನು ಪಟ್ಟಣದ ಜೆಡಿಎಸ್ ಭವನದಲ್ಲಿ ಪುರಸಭೆ ಅಧ್ಯಕ್ಷೆ ವಸಂತ ಶ್ರೀಕಂಠ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ನೂತನ ಪುರಸಭೆ ಕಟ್ಟಡಕ್ಕೆ ಪುರಸಭೆಯನ್ನು ಸ್ಥಳಾಂತರ ಮಾಡದೇ ಇರುವುದು, ಪಟ್ಟಣದ ಪುರಸಭೆಯ ಸ್ವಾಗತ ನಾಮಫಲಕ ಅಳವಡಿಸದಿರಿವುದು ಮತ್ತು ಪಟ್ಟಣದ ಪ್ರಮುಖ ವೃತ್ತಗಳ ಅಗಲೀಕರಣ, ಪಾರ್ಕ್ ನಿರ್ವಹಣೆ ಮತ್ತು ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.

ಮುಖಂಡ ಆರ್ ಮಣಿಕಂಠರಾಜ್ ಗೌಡ ಮಾತನಾಡಿ ಕಳೆದ ಬಾರಿ ನಡೆದ ಬಜೆಟ್ ನ ವಿಚಾರವಾಗಿ ಎನು ಅಭಿವೃದ್ಧಿ ಕಾಮಗಾರಿ ಮಾಡಿದ್ದೀರಾ ಇದೆ ಎಂಬ ವಿಚಾರವಾಗಿ ಅಧಿಕಾರಿಗಳು ಹೇಳಲು ತಯಾರಿಲ್ಲ. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದಕ್ಕೆ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ನೀಡಿರುವ ಸಂವಿಧಾನ.

ಪಟ್ಟಣ ಸುಂದರವಾಗಿದೆ ಮತ್ತು ನಾವು ಆರೋಗ್ಯವಾಗಿ ಇದ್ದೇವೆ ಎಂದರೆ ಅದರಲ್ಲಿ ಪೌರಕಾರ್ಮಿಕರ ಶ್ರಮ ಇರುತ್ತದೆ. ಸರ್ಕಾರ ಪೌರಕಾರ್ಮಿಕರ ಹಿತ ಕಾಯುವ ದೃಷ್ಟಿಯಿಂದ ಸರ್ಕಾರ ಮೊಟ್ಟೆ ನೀಡುತ್ತಿದೆ. ಆದರೆ ಪೌರಕಾರ್ಮಿಕರಿಗೆ ಸಮರ್ಪಕವಾಗಿ ಮೊಟ್ಟೆ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಈ ಸಂದರ್ಭ ಪುರಸಭಾ ಮುಖ್ಯ ಅಧಿಕಾರಿಗಳಾದ ವಸಂತಕುಮಾರಿ, ಅಭಿಯಂತರ ನಾಗರಾಜ್, ಪುರಸಭಾ ಸದಸ್ಯರುಗಳಾದ ಮಂಜುಬಾದಾಮಿ, ಸಿಸ್ಟಮ್ ಸಿದ್ದು, ನಾಗರಾಜ್, ರೂಪ ಪರಮೇಶ್, ಪ್ರಕಾಶ್, ಮಧನ್ ರಾಜ್, ಮತ್ತಿತರ ಪುರಸಭಾ ಸದಸ್ಯರು ಸೇರಿದಂತೆ ಮುಖಂಡರುಗಳಾದ ಮಾಜಿ ತಾಪಂ ಉಪಾಧ್ಯಕ್ಷ ಬಿ. ಮರಯ್ಯ, ಪುರಸಭಾ ಮಾಜಿ ಸದಸ್ಯ ಲೋಕೇಶ್, ಇತರರು ಇದ್ದರು.