ತಿ. ನರಸೀಪುರ: ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಆರೋಗ್ಯ ಸುಧಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪಾರ್ವತಮ್ಮನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ವರುಣ ಕ್ಷೇತ್ರ ಮಹಿಳಾ ಘಟಕದ ಅಧ್ಯಕ್ಷೆ ಕುಪ್ಯಾ ಭಾಗ್ಯಮ್ಮ ಪ್ರಾರ್ಥನೆ ಮಾಡಿದರು.

ಪಾರ್ವತಮ್ಮನವರು ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಕೂಡ  ಸಿ.ಎಂ ಪತ್ನಿ ಎಂದು ತೋರಿಸಿಕೊಳ್ಳದೆ ಸಾರ್ವಜನಿಕವಾಗಿ ಶ್ರೀ ಸಾಮಾನ್ಯರಂತೆ ನಡೆದುಕೊಳ್ಳುವ ಸರಳ ಸಜ್ಜನಿಕೆಯ ವ್ಯಕ್ತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಶೀಘ್ರ ಗುಣವಂತರಾಗಲೆಂದು ಪೂಜೆ ಸಲ್ಲಿಸಿದ್ದೇವೆ ಎಂದರು.