ಮೈಸೂರು : ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಬೆಂಬಲಕ್ಕೆ ಪ್ರತಾಪ್ ಸಿಂಹ ನಿಂತಿದ್ದಾರೆ.  ನಾನು ಕೂಡ ದರ್ಶನ್ ಅಭಿಮಾನಿ ಎಂದು ಪ್ರತಾಪ್ ಸಿಂಹ ಹೇಳಿದರು. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ  ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ನಟನೆಯ ಡೆವಿಲ್ ಚಿತ್ರದ ಪೋಸ್ಟರ್ ಪ್ರತಾಪ್ ಸಿಂಹ ಬಿಡುಗಡೆ ಮಾಡಿ  ಪ್ರಚಾರ ಮಾಡಿದ್ದಾರೆ.

ಕೊಲೆ ಆರೋಪಿ ದರ್ಶನ್ ಅಭಿನಯದ ಡೆವಿಲ್ ಚಿತ್ರ ಪೋಸ್ಟರನ್ನು ಪ್ರತಾಪ್ ಸಿಂಹ ಬಿಡುಗಡೆ ಮಾಡಿದ್ದಾರೆ. ಕನ್ನಡದಲ್ಲಿ ಸಾಕಷ್ಟು ನಟರು ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ. ಆದ್ರೆ ಅತೀ ಗಲ್ಟ್ ಫಾಲೋರ್ಸ್ ಇರೋದು ಒನ್ ಅಂಡ್ ಓನ್ಲೀ ದರ್ಶನ್‌ಗೆ ಮಾತ್ರ ಎಂದರು.

ನಾನು ಮೆಜೆಸ್ಟಿಕ್, ಕರಿಯ ಆ ಕಾಲದ ಸಿನಿಮಾಗಳನ್ನ ನೋಡುತ್ತಾ ಬಂದಿದ್ದೇನೆ. ಕೆಂಚಾಲೋ ಮಂಚಾಲೋ ಸಾಂಗ್ ಕ್ರೇಜ್ ಹುಟ್ಟಿಸಿತ್ತು. ಆ ಕಾಲದಿಂದಲೂ ನಾನು ದರ್ಶನ್ ಅಭಿಮಾನಿ ಎಂದರು.  ಕನ್ನಡ ಚಿತ್ರರಂಗದಲ್ಲಿದ್ದು, ಕನ್ನಡ ಚಿತ್ರದ ಬೆಳವಣಿಗೆಗೆ ದೊಡ್ಡ ಕಾಂಟ್ರ್ಯೂಬುಷನ್ ಕೊಟ್ಟಿದ್ದಾರೆ. ಡಿಸೆಂಬರ್ 12 ರಿಲೀಸ್ ಆಗಬೇಕಿತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ 11 ಕ್ಕೆ ರಿಲೀಸ್ ಆಗ್ತಿದೆ ಎಂದರು.

ಕನ್ನಡ ಜನರ ಪ್ರೀತಿ ಸಿನಿಮಾವನ್ನ ಗೆಲ್ಲಿಸಲಿ. ತಾಯಿ ಚಾಮುಂಡೇಶ್ವರಿಯ ಕೃಪೆ ದರ್ಶನ್ ಮೇಲಿರಲಿ. ಈ ಸಿನಿಮಾ ಅದ್ಬುತ ಯಶಸ್ಸು ಕಾಣಲಿ ಎಂದು ಮೈಸೂರಿನಲ್ಲಿ ಡೆವಿಲ್ ಪೋಸ್ಟರ್ ಬಿಡುಗಡೆ ಮಾಡಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.