ಟಿ ನರಸೀಪುರ : ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ಹಳ್ಳ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸಿ ಜನತೆ ಹೈರಾಣಾಗಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿ ಆಯಿತಲ್ಲ ಎಂದು ಜನತೆ ಖುಷಿ ಪಟ್ಟಿದ್ದರು. ಅದೇ ಜನ ಇಂಥ ಕಳಪೆ ಕಾಮಗಾರಿ ನೋಡಿ ಜನಪ್ರತಿನಿಧಿಗಳ ವಿರುದ್ಧ ಜನತೆ ಇಡೀ ಶಾಪ ಹಾಕುತ್ತಿದ್ದಾರೆ.

ನರಸೀಪುರ ಪಟ್ಟಣದ ಪುರಸಭೆ ವ್ಯಾಪ್ತಿಯ ಕೆನರಾ ಬ್ಯಾಂಕ್ ರಸ್ತೆ, ಕುರಬಗೇರಿ, ವಿಶ್ವಕರ್ಮ ಬೀದಿ ಗೋಪಾಲಪುರದಲ್ಲಿ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಕಳಪೆ ಕಂಡು ಬಂದಿದೆ. 4ಕೋಟಿ 70ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಅಭಿವೃದ್ಧಿ ಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಹೆಚ್ ಸಿ ಮಹದೇವಪ್ಪ ಇಬ್ಬರಿಗೂ ಸೇರಿರುವ ನರಸೀಪುರ ಕ್ಷೇತ್ರ. ಕಳಪೆ ಕಾಮಗಾರಿ ವಿರುದ್ಧ ನರಸೀಪುರ ಜನತೆ ಕಿಡಿಕಾರಿದರು. ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಸಚಿವ ಹೆಚ್ ಸಿ ಮಹದೇವಪ್ಪ ಸಂಸದ ಸುನಿಲ್ ಬೋಸ್ ಮೂವರು ಕಾಮಗಾರಿ ಪರಿಶೀಲನೆ ಮಾಡುವಂತೆ ಜನತೆ ಮನವಿ ಮಾಡಿಕೊಂಡಿದೆ.