ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ದೊಡ್ಡ ಜಾತ್ರ ಮಹೋತ್ಸವ ಹಿನ್ನೆಲೆಯಲ್ಲಿ ಮಾ.30 ರಂದು ನಡೆಯುವ ಶ್ರೀ ನಂಜುಂಡೇಶ್ವರ ಸ್ವಾಮಿಯವರ ಗೌತಮ ಪಂಚ ಮಹಾ ರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ.
ದೇವಾಲಯದಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಗೌತಮ ಪಂಚ ಮಹಾ ರಥೋತ್ಸವಕ್ಕೆ ಸುಮಾರು ಏಳು ಅಡಿ ಎತ್ತರದ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಶ್ರೀಕಂಠೇಶ್ವರ ಸಮೇತ ಪಾರ್ವತಮ್ಮ, ಗಣಪತಿ, ಚಂಡಿಕೇಶ್ವರ, ಸುಬ್ರಮಣ್ಯ ರಥಗಳನ್ನು ಕಟ್ಟುವ ಕಾರ್ಯ ನಡೆಯುತ್ತಿದ್ದು, 5 ರಥಗಳಿಗೂ ಮೇಲೆ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಪಂಚ ರಥಗಳಿಗೆ ಅಳವಡಿಸುವ ಕಳಸ ಮತ್ತು ಛತ್ರಿಗಳಿಗೆ ಪಾಲಿಶ್ ಮಾಡುವ ಕಾರ್ಯ ಮುಕ್ತಾಯಗೊಂಡಿದೆ. ಇದರಲ್ಲಿ ಆಕರ್ಷಣೆಯಾಗಿರುವ ಗೌತಮ ಪಂಚ ಮಹಾ ರಥೋತ್ಸವದ ಕಳಸವು 7 ಅಡಿ ಎತ್ತರವಾಗಿದ್ದು ಇದು ವಿಶೇಷವಾಗಿದೆ.

