ಮೈಸೂರು : ಡ್ಯೂಟಿ ಬಿಟ್ಟು, ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಪೊಲೀಸರು ಬಂದಿದ್ದು, ಸರಗೂರು ಪೊಲೀಸ್ ಪೇದೆಗಳಿಂದ ಹಣ ಸೆಟ್ಲಮೆಂಡ್ ಡೀಲ್ ನಡೆದಿದೆ. ಸರಗೂರು ಪೊಲೀಸ್ ಠಾಣೆ ಪೇದೆಗಳಿಂದ ದೌರ್ಜನ್ಯ ನಡೆಯುತ್ತಿರುವ ಘಟನೆ ಮೈಸೂರಿನ ಮೇಟಗಳ್ಳಿಯಲ್ಲಿ ನಡೆದಿದೆ.
ಮನೆಯಲ್ಲಿ ಹೆಂಡತಿ ಮಕ್ಕಳು ಚೀರಾಡಿದರು ಸರಗೂರು ಪೊಲೀಸ್ ಪೇದೆಗಳಾದ ಕೃಷ್ಣಯ್ಯ, ಸುನೀಲ್ ಬಿಡಲಿಲ್ಲ. ಮನೆಗೆ ನುಗ್ಗಿ ರಸ್ತೆಗೆ ಎಳೆದು ತಂದು ನಡು ರಸ್ತೆಯಲ್ಲಿ ಗಲಾಟೆ ನಡೆಸಿದರು. ಸಿವಿಲ್ ಪ್ರಕರಣ ಎದುರಿಸುತ್ತಿದ್ದ ಸರಗೂರು ಮೂಲದ ಕೆಂಪರಾಜು. ಹಣಕಾಸಿನ ವಿಚಾರಕ್ಕೆ ಕೆಂಪರಾಜು ಮೇಲೆ ಮಹಿಳೆ ದೂರು ಕೊಟ್ಟಿದ್ದರು.

ಮಹಿಳೆ ದೂರು ಆಧರಿಸಿ ಒಮ್ಮೆ ಠಾಣೆಗೆ ಕರೆಸಿ 50 ಸಾವಿರ ಕೊಡುವ ಬದಲು 80 ಸಾವಿರ ಕೊಡಬೇಕು ಅಂತ ಪೋಲಿಸ್ ಪೆದೆ ಕೃಷ್ಣಯ್ಯ, ಕೆಂಪರಾಜು ಯಿಂದ ಆರೋಪ ಕೇಳಿಬಂದಿದೆ. ಬಳಿಕ ದೂರು ಎದುರಿಸುತ್ತಿರೋ ಕೆಂಪರಾಜು ನಿವಾಸದ ಮುಂದೆ ಹಣ ಕೊಡುವಂತೆ ಗಲಾಟೆ ನಡೆಸಲಾಯಿತು. ಮೈಸೂರಿನ ಮೇಟಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಕೆಂಪರಾಜು ವಾಸಗಿದ್ದಾರೆ.
ಹಣ ನೀಡಲು ತಡವಾದ ಕಾರಣಕ್ಕೆ ಬಾಡಿಗೆ ಮನೆ ಬಂದು ಹೆಂಡತಿ ಮಕ್ಕಳ ಚೀರಾಡ್ರು ಬಿಡದೆ ರಸ್ತೆಯಲ್ಲಿ ಪೋಲಿಸ್ ದೌರ್ಜನ್ಯ ಮಾಡಿದರು. ಮುಂದೆ ಪೊಲೀಸ್ ಪೇದೆಗಳ ಹೈಡ್ರಾಮ ನಡೆಯಿತು. ಪೊಲೀಸ್ ಪೇದೆಗಳ ದೌರ್ಜನ್ಯ ಹಿನ್ನಲೆ ಮೇಟಗಳ್ಳಿ ಪೊಲೀಸರಿಗೆ ದೂರು ನೀಡಲಾಯಿತು. ಗಲಾಟೆ ಮಾಡ್ತಾ ಇದ್ದ ಪೇದೆಗಳನ್ನ ಮೇಟಗಳ್ಳಿ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದರು.

