ಮೈಸೂರು : ಮಂಡ್ಯದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದಿಂದ ಮೈಸೂರಿಗೆ ಮೃತ ದೇಹವನ್ನು ಪೋಷಕರು ತೆಗೆದು ಕೊಂಡು ಬಂದಿದ್ದಾರೆ. 29ನೇ ತಾರೀಕು ಮಗುವಿನ ಕಾಲಿನ ಕಿರು ಬೆರಳು ನೋವಾಗಿದೆ ಎಂದು ಮಿಮ್ಸ್ ಆಸ್ಪತ್ರೆಗೆ ಪೋಷಕರು ದಾಖಲು ಮಾಡಿದ್ದರು.
ಆಪರೇಷನ್ ಆದ ಬಳಿಕ ಬೆಳಿಗ್ಗೆ ಬೆಳಗಿನ ಜಾವ ಕೋಮ ಸ್ಥಿತಿಗೆ ಮಗು ಹೋಗಿತ್ತು. ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಮಂಡ್ಯದಲ್ಲಿ ಪೋಸ್ಟ್ ಮಾರ್ಟಂ ಮಾಡಿಸದೆ ಮೈಸೂರಿಗೆ ತೆಗೆದು ಕೊಂಡು ಬಂದಿದ್ದಾರೆ. ಸರಿಯಾದ ತನಿಖೆ ನಡೆಯಬೇಕು ಮಗುವಿನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.

ಮಂಡ್ಯದ ಶವಾಗಾರದಲ್ಲಿ ನಮ್ಗೆ ನಂಬಿಕೆ ಇಲ್ಲಾ. ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲಾ. ಮೈಸೂರಿನಲ್ಲಿಯೇ ಪೋಸ್ಟ್ ಮಾರ್ಟಂ ಆಗ್ಬೇಕು. ವೈದ್ಯರು ಓವರ್ ಡೋಸ್ ಕೊಟ್ಟಿರ ಬಹುದು ಅಥವಾ ಬೇರೆ ಮೆಡಿಸಿನ್ ಕೊಟ್ಟಿದ್ದಾರೆ ಅನ್ಸುತ್ತೆ. ಸರಿಯಾದ ತನಿಖೆ ಆಗಿ ಮಿಮ್ಸ್ ಆಸ್ಪತ್ರೆಯ ವೈದ್ಯರನ್ನ ಅಮಾನತು ಮಾಡಿ. ಒಂದೇ ಮಗು ಇದ್ದ ಕಾರಣ ಕುಟುಂಬಸ್ಥರಿಗೆ ನ್ಯಾಯ ಕೊಡಿಸಿ ಜೊತೆಗೆ ಪರಿಹಾರ ಕೊಡಿ ಎಂದು ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮೃತ ಮಗು ಸಾನ್ವಿ ಸೋದರ ಮಾವ ಮಧು ಹೇಳಿಕೆ ನೀಡಿದ್ದಾರೆ.

