ಮೈಸೂರು: ಮೈಸೂರಿನ ವಿನಾಯಕನಗರ ಮಾತೃಮಂಡಳಿ ವೃತ್ತದ ಸಬ್ ವೇ ನಲ್ಲಿ ಅನಾಥ ಶವ ಪತ್ತೆಯಾಗಿದೆ.ಅತಿಯಾದ ಮಧ್ಯಪಾನ ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮೃತನಿಗೆ ಸುಮಾರು 30 ರಿಂದ 35 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ.ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತನ ಮಾಹಿತಿ ಕಲೆಹಾಕುತ್ತಿದ್ದಾರೆ.