ಮೈಸೂರು: ಹಳೇ ದ್ವೇಷ ಹಿನ್ನಲೆ ಯುವಕನಿಗೆ ನಾಲ್ವರ ಗುಂಪು ಅಟ್ಯಾಕ್ ಮಾಡಿ ಚಾಕುವಿನಿಂದ ಇರಿದ ಘಟನೆ ಕಲ್ಯಾಣಗಿರಿಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ.

ವಾಸೀಮ್ (28) ಎಂಬ ಯುವಕ ಗಾಯಗೊಂಡಿದ್ದಾನೆ.ಕಾರ್ತಿಕ್,ವೇಲು ಹಾಗೂ ಇತರರ ಮೇಲೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಂಟರಿಂಗ್ ಕೆಲಸ ಮಾಡುವ ವಾಸೀಮ್ ಆರ್ಯಬೇಕರಿ ಬಳಿ ಬರುತ್ತಿದ್ದಾಗ ಎದುರಾದ ಕಾರ್ತಿಕ್ ಗುಂಪು ವಾಸೀಮ್ ಮೇಲೆ ಅಟ್ಯಾಕ್ ಮಾಡಿದೆ. ಗುಂಪಿನಿಂದ ತಪ್ಪಿಸಿಕೊಳ್ಳಲು ವಾಸೀಮ್ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ವಾಸೀಮ್ ಬೆನ್ನಿಗೆ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದಾರೆ. ಗಾಯಗೊಂಡ ವಾಸೀಮ್ ಗೆ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.