ಮೈಸೂರು : ಪಾಗಲ್ ಪ್ರೇಮಿ ಹುಚ್ಚಾಟ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಘಟನೆ ನಡೆದಿದೆ.
ಯುವತಿ ತಿರಸ್ಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸರಿಂದ ಪಾಗಲ್ ಪ್ರೇಮಿಯನ್ನು ರಕ್ಷಣೆ ಮಾಡಲಾಗಿದೆ. ಪೆಟ್ರೋಲ್ ಸುರಿದುಕೊಂಡು ಯುವತಿಯನ್ನ ತಬ್ಬಿಕೊಳ್ಳಲು ಪಾಗಲ್ ಪ್ರೇಮಿ ಮುಂದಾಗಿದ್ದಾನೆ.
ಮಳವಳ್ಳಿ ತಾಲೂಕಿನ ಅಲಗೂಡು ಚಂದನ್ ಆತ್ಮಹತ್ಯೆ ಯತ್ನಿಸಿದ ಪಾಗಲ್ ಪ್ರೇಮಿ. ಅದೇ ಗ್ರಾಮದ ಯುವತಿಯನ್ನ ಒನ್ ಸೈಡ್ ಚಂದನ್ ಲವ್ ಮಾಡ್ತಿದ್ದ. ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. ಯುವತಿ ತಿರಸ್ಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಯುವತಿಯನ್ನ ತಬ್ಬಿಕೊಳ್ಳಲು ಚಂದನ್ ಮುಂದಾಗಿದ್ದಾನೆ.
ಈ ವೇಳೆ ಯುವತಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

