ನಂಜನಗೂಡು: ಸಂಪೂರ್ಣ ಕೆಸರುಮಯವಾದ ರಸ್ತೆ. ಅನೈರ್ಮಲ್ಯ ಚರಂಡಿ ವ್ಯವಸ್ಥೆ, ಸ್ವತಂತ್ರ್ಯ ಬಂದು 75 ವರ್ಷ ಕಳೆದರು ಅಭಿವೃದ್ಧಿ ಕಾಣದ ಗ್ರಾಮ‌ ಇದು. ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ದುಸ್ಥಿತಿ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ತವರು ಜಿಲ್ಲೆಯ ನಂಜನಗೂಡು ವಿಧಾನಸಭಾ ಕ್ಷೇತ್ರದ ಹೆಮ್ಮರಗಾಲ ಗ್ರಾಮ ಸಮಸ್ಯೆಗಳ ಆಗರವಾಗಿದೆ. ಗ್ರಾಮದ ಶ್ರೀ ಮಲಾರಸಮ್ಮ ಬೀದಿಯ ಮುಖ್ಯ ರಸ್ತೆಯಲ್ಲ ಕೆಸರು ಮಯವಾಗಿದ್ದು, ಚರಂಡಿಗಳು ತುಂಬಿ ಗಬ್ಬೆದ್ದು ನಾರುತ್ತಿವೆ. ಮಳೆ ಬಂದರಂತೂ ಗ್ರಾಮದ ಪಾಡು ಹೇಳತೀರದು. ಮಕ್ಕಳು-ವೃದ್ದರು ರಸ್ತೆಯಲ್ಲಿ ಸಂಚರಿಸಲು ಹರಸಹಾಸ ಪಡಬೇಕಾದ ಪರಿಸ್ಥಿತಿ.

ಗ್ರಾಮದ ತುಂಬೆಲ್ಲ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಜನರು ಸಂಕ್ರಾಮಿಕ ರೋಗದ ಬೀತಿ ಎದುರಿಸುತ್ತಿದ್ದಾರೆ. ರಸ್ತೆ ಸರಿಪಡಿಸುವಂತೆ ಹತ್ತಾರು ಬಾರಿ‌ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಲಿಲ್ಲ. ಕೆಸರು ರಸ್ತೆಯಲ್ಲಿ ಹಲವರು ಬಿದ್ದು ಗಾಯಗೊಂಡಿುವ ಸಾಕಷ್ಟು ಉದಾಹರಣೆಗಳಿವೆ.

ಈ ಬೆಳವಣಿಗೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜಕಾರಣಿಗಳು ಮತ ಕೇಳಲು ಬರ್ತಾರೆ ಚುನಾವಣೆ ಬಳಿಕ ನಮ್ಮ ಕಷ್ಟ ಕೇಳಲ್ಲ. ರಸ್ತೆ ಅಭಿವೃದ್ಧಿ ಮಾಡುವ ತನಕ ಚುನಾವಣೆಯಲ್ಲಿ ಮತಚಲಾಯಿಸಲ್ಲ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.