ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಬಾರಿ ದಾಖಲೆ ಮೊತ್ತ ಸಂಗ್ರಹವಾಗಿದೆ.

ಸುಮಾರು 40 ದಿನಗಳ ಅವಧಿಗೆ 3,02,63,795/- ರೂ. ಸಂಗ್ರಹವಾಗಿದೆ. ವಿಶೇಷವೆಂದರೆ ದೇವಾಲಯಕ್ಕೆ ವಿದೇಶಿಗರ ಭೇಟಿ ಗಣನೀಯವಾಗಿ ಹೆಚ್ಚಿದೆ. ಇಂಗ್ಲೆಂಡ್, ಸ್ವೀಡನ್, ಸಿಂಗಪುರ್, ಕುವೈತ್, ನೇಪಾಲ್, ಮಲೇಶಿಯಾ, ಯುಎಸ್ ಎ, ಭೂತಾನ್, ತೈವಾನ್ ದೇಶದ ವಿವಿದ ಮೌಲ್ಯದ ಕರೆನ್ಸಿಗಳು ಸಂಗ್ರಹವಾಗಿದೆ.

82 ಗ್ರಾಂ ಚಿನ್ನ ಹಾಗೂ 2 ಕೆಜಿ 680 ಗ್ರಾಂ ಬೆಳ್ಳಿ ಕಾಣಿಕೆಯಾಗಿ ಬಂದಿದೆ. 20 ಕ್ಕೂ ಹೆಚ್ಚು ಹುಂಡಿ ಎಣಿಕೆ ಕಾರ್ಯ ನಡೆದಿದೆ.