ನಂಜನಗೂಡು: ನಂಜನಗೂಡು ನಗರದ ನಗರಸಭಾ ಕಾರ್ಯಾಲಯದಲ್ಲಿ 2025-26 ನೇ ಸಾಲಿನ ಆಯವ್ಯಯವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಉಪಸ್ಥಿತಿಯಲ್ಲಿ ನಗರ ಸಭಾ ಅಧ್ಯಕ್ಷ ಎನ್. ಶ್ರೀಕಂಠ ಮಂಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು ಒಟ್ಟು 3802.87 ಲಕ್ಷ ರೂಗಳು. ಆಯವ್ಯಯದ ವೆಚ್ಚದ ಮೂಲಗಳಲ್ಲಿ 5166.35 ಲಕ್ಷ ರೂಗಳು. ಪ್ರಾರಂಭಿಕ ಶುಲ್ಕ 16.59,21000, ಜಮಾಗಳು 46.40,64000. ಉಳಿತಾಯ 75.73000 ರೂಗಳು. ಒಟ್ಟು 63.24,12000 ಬಜೆಟ್ ಮಂಡಿಸಲಾಯಿತು.
ನಗರಸಭಾ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಂತೆ ಎಲ್ಲವನ್ನು ಬಜೆಟ್ ನಲ್ಲಿ ಸೇರಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷ ಎನ್. ಶ್ರೀಕಂಠ ಹೇಳಿದರು. ನಗರಸಭಾ ಉಪಾಧ್ಯಕ್ಷೆ ರಿಯಾನ ಬಾನು, ನಗರಸಭಾ ಪೌರಾಯುಕ್ತ ವಿಜಯ್ ಸೇರಿದಂತೆ ನಗರಸಭಾ ಸದಸ್ಯರು ಹಾಜರಿದ್ದರು.

