ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಿವಾಸಿ ಡಾ.ಸರಸ್ವತಿ ಚಂದ್ರಶೇಖರ್ ರವರಿಗೆ ತಮಿಳುನಾಡಿನಲ್ಲಿ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ ವೃತ್ತಿಪರ ಕೌಶಲ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ತಮಿಳುನಾಡಿನ ಹೊಸೂರು ಪಟ್ಟಣದ ಖಾಸಗಿ ಹೋಟೆಲ್ ವೊಂದರಲ್ಲಿ ಅಂತರಾಷ್ಟ್ರೀಯ ಸಾಧನೆಯ ಪ್ರಶಸ್ತಿಗಳು, ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿ ವತಿಯಿಂದ ನೀಡುವ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ ವೃತ್ತಿಪರ ಕೌಶಲ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಂಜನಗೂಡಿನಲ್ಲಿ ಆಟೋ ಅಮ್ಮ ಎಂದೇ ಖ್ಯಾತಿ ಪಡೆದಿರುವ ಡಾ.ಸರಸ್ವತಿ ಚಂದ್ರಶೇಖರ್ ರವರ 15 ವರ್ಷಗಳ ಸಾಮಾಜಿಕ ಸೇವೆಗಳನ್ನು ಗುರುತಿಸಿ ಮೈಸೂರು, ಕರ್ನಾಟಕ ಇಂಡಿಯಾ ರಿಯಾಲಿಟಿ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಅಕಾಡೆಮಿ ವಿಶ್ವ ದಾಖಲೆಗಾಗಿ ಮಾರ್ಗಸೂಚಿಗಳ ಪ್ರಕಾರ ಮೌಲ್ಯಮಾಪನ ಮಾಡಿ, ಸಮಾಜ ಸೇವೆಯಲ್ಲಿ ತೊಡಗಿರುವ ಡಾ. ಸರಸ್ವತಿ ಚಂದ್ರಶೇಖರ್ ರವರಿಗೆ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ ವೃತ್ತಿಪರ ಕೌಶಲ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚೇರ್ಮನ್ ಡಾ. ರಾಬರ್ಟ್ ರೋಮ್ಯಾನುಯೆಲ್ ಹೇರ್ಮ್ಯಾನ್, ಅಕಾಡೆಮಿಯ ಅಧ್ಯಕ್ಷ ಡಾ.ಎ.ಪಿ.ಶ್ರೀನಾಥ್, ಇಂಟರ್ ನ್ಯಾಷನಲ್ ತಾಂತ್ರಿಕ ಅಧಿಕಾರಿ , ಶ್ರೀ.ಅನಾಥನ್ ಕುಪುಸಾಮಿ, ನಿರ್ದೇಶಕ ಡಾ.ಆರ್.ಸೆಲ್ವಂ, ಉಪಾಧ್ಯಕ್ಷ ಅರ್ಜುನ್ ಸೇರಿದಂತೆ ಹಲವರು ಹಾಜರಿದ್ದರು.

