ಮೈಸೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು. 2015 ರಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾದಾಗ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ರಾಜ್ಯದ ಜನರು ಮೈಸೂರು ಜನರು ಅನ್ನ ತಿನ್ನುತ್ತಾ ಇರೋದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಿಂದ‌ ಅನ್ನ ವಿದ್ಯೆ ಕೊಟ್ಟೋರು ಕೃಷ್ಣರಾಜ ಒಡೆಯರ್.

ನಾಡಿಗೆ ಆದರ್ಶಪ್ರಾಯ ವ್ಯಕ್ತಿ ಅಂದ್ರೇ ನಾಲ್ವಡಿ ಕೃಷ್ಣರಾಜ ಒಡೆಯರ್. ಕನ್ನಂಬಾಡಿ ಕಟ್ಟೆಯಿಂದ ಚಿತ್ರದುರ್ಗದ ತನಕ, ಮೈಸೂರಿನಿಂದ ಭದ್ರಾವತಿ ತನಕ ಕೈಗಾರಿಕೆ ಎಲ್ಲವೂ ಕೂಡ ಕೃಷ್ಣರಾಜ ಒಡೆಯರ್ ಕೊಡುಗೆ. ಅಂತಹವರ ಜಯಂತಿ ವಿಜೃಂಭಣೆಯಿಂದ ಆಚರಣೆ ಆಗ್ಬೇಕು ಅಂತ ಹೇಳಿದ್ದೆ. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.

ಕನ್ನಡಪರ ಹೋರಾಟಗಾರ ನಾರಾಯಣ್ ಗೌಡ ಯದುವೀರ್ ಒಡೆಯರ್ ಅವರನ್ನು ಟೀಕೆ ಮಾಡುವ ಭರದಲ್ಲಿ ಮೈಸೂರು ಸಂಸ್ಥಾನವನ್ನು ಎಳೆದು ತಂದಿದ್ದರು. ಅಂತಹ ಸಂದರ್ಭದಲ್ಲಿ ನಾನು ನಾರಾಯಣ್ ಗೌಡರಿಗೆ ಹೇಳಿದ್ದೆ. ಸಂಸ್ಥಾನವನ್ನು ಎಳೆದು ತರಬೇಡಿ. ರಾಜ್ಯಕ್ಕೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ ಎಂದು ಹೇಳಿದ್ದೆ. ಕನ್ನಡ ಅಂದ್ರೇ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರು.

ಈಗಿನ ರಾಜಕಾರಣಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮೇಲ್ಪಂಕ್ತಿಯಾಗಿ ತೆಗೆದುಕೊಳ್ಳಬೇಕು. ಅವರ ಕೆಲಸ ಕಾರ್ಯಗಳು ನಮಗೆ ಆದರ್ಶವಾಗಿವೆ. ನಮಗೆಲ್ಲ ಧನ್ಯತಾ ಭಾವ ಇರಬೇಕು. ಸದಾಕಾಲ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನೆಯಬೇಕು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.