ಮೈಸೂರು : ಡ್ರಗ್ಸ್ ಫ್ಯಾಕ್ಟರಿ ಪತ್ತೆ ಬಳಿಕ, ಮೈಸೂರು ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದರು. ಮೈಸೂರು ನಗರದಾದ್ಯಂತ ಪೊಲೀಸರ ಕಾರ್ಯಚರಣೆ ಮುಂದುವರೆಯಿತು.
ಎಂಡಿಎಂಎ, ಗಾಂಜಾ ವಿರುದ್ಧ ಖುದ್ದು ಫೀಲ್ಡ್ ಗೆ ಇಳಿದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ1 ಬಿಂದುಮಣಿ, ಡಿಸಿಪಿ2 ಸುಂದರ್ ರಾಜ್ ಹಾಗೂ ಪೊಲೀಸ್ ಸಿಬ್ಬಂದಿ. ತಡರಾತ್ರಿ 11 ಪುರುಷರ ಹಾಸ್ಟೆಲ್ ನಲ್ಲಿ ತಪಾಸಣೆ ನಡೆಸಲಾಯಿತು.
ಕಾರು, ಬೈಕ್, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕರ ತಪಾಸಣೆ ಮಾಡಲಾಯಿತು. ಉದಯಗಿರಿ, ಎನ್ ಆರ್ ಮೊಹಲ್ಲಾ ಸೇರಿದಂತೆ ಹಲವು ಕಡೆ ತಪಾಸಣೆ ನಡೆಸಲಾಯಿತು. ಈ ವರೆಗೂ 860 ಗ್ರಾಂ ಗಾಂಜಾ ಸೀಜ್, ಓರ್ವ ಆರೋಪಿ ವಶಕ್ಕೆ ಪಡೆಯಲಾಗಿದೆ.
140 ಯುವಕರ ತಪಾಸಣೆ, 12 ಪ್ರಕರಣ ದಾಖಲಾಗಿದೆ. ಅನುಮಾನ ಬಂದ 10 ಮಂದಿ ವಶಕ್ಕೆ ಪಡೆದು ಪರಿಶೀಲನೆಗೆ ಪೊಲೀಸರು ಒಳಪಡಿಸಿದ್ದಾರೆ.

