ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಚರಣೆ ನಡೆಯುತ್ತಿದ್ದು, ದೇವನೂರು ಗ್ರಾಮದಲ್ಲಿ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಸರ್ವೆ ನಂ. 155, 156, 228/2, 229/1, 229/2, 153/2 ಪ್ರದೇಶಗಳಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣವಾಗಿತ್ತು. ವಾಹನಗಳ ತಂಗುದಾಣ ಹಾಗೂ ಇತರೆ ಉಪಯೋಗಗಳಿಗೆ ದುರುಪಯೋಗ ನಡೆಯುತ್ತಿದೆ. ಸ್ಥಳ ಪರಿಶೀಲನೆ ವೇಳೆ ಒತ್ತುವರಿ ದೃಢವಾಗಿದ್ದು, ಸರ್ಕಾರದ ಅಧಿಸೂಚನೆ ಹಾಗೂ ಭೂಸ್ವಾಧೀನಾಧಿಕಾರಿಗಳ ಪತ್ರ ಆಧಾರ ತೆರವು ಕಾರ್ಯಾಚರಣೆಯು ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯುತ್ತಿದೆ.